ಜಿಲ್ಲಾ ಸುದ್ದಿಕ್ರೈಂ ಸುದ್ದಿಟ್ರೆಂಡಿಂಗ್ ಸುದ್ದಿಗಳುತಾಲೂಕುರಾಜ್ಯ ಸುದ್ದಿಸೋಶಿಯಲ್ ಮೀಡಿಯಾ ಅಪ್ಡೇಟ್ಸ್

ಮಹದೇಶ್ವರ ಬೆಟ್ಟದ ಹೆದ್ದಾರಿ: ತಡೆಗೋಡೆ ಮೇಲೆ ಅಪರಿಚಿತನ ನಿದ್ರೆ — ಚಿರತೆ ದಾಳಿ ಭೀತಿ!

Share News

ತಾಳುಬೆಟ್ಟ / ಹನೂರು: ಮಲೆ ಮಹದೇಶ್ವರ ಬೆಟ್ಟಕ್ಕೆ ಹೋಗುವ ಮುಖ್ಯ ಹೆದ್ದಾರಿಯ ಎರಡನೇ ತಿರುವಿನಲ್ಲಿ ಆತಂಕಕಾರಿ ದೃಶ್ಯವೊಂದು ಕಂಡುಬಂದಿದ್ದು, ಅಪರಿಚಿತ ವ್ಯಕ್ತಿಯೊಬ್ಬ ರಸ್ತೆಯ ಅಪಾಯಕಾರಿ ತಡೆಗೋಡೆಯ (Parapet Wall) ಮೇಲೆಯೇ ನಿದ್ರೆಗೆ ಜಾರಿದ್ದಾನೆ.

​ತಾಳುಬೆಟ್ಟ ಹಾಗೂ ಸುತ್ತಮುತ್ತಲ ಅರಣ್ಯ ಪ್ರದೇಶಗಳಲ್ಲಿ ಇತ್ತೀಚಿನ ದಿನಗಳಲ್ಲಿ ಚಿರತೆ ಸೇರಿದಂತೆ ಕ್ರೂರ ಕಾಡುಪ್ರಾಣಿಗಳ ಸಂಚಾರ ಹೆಚ್ಚಾಗಿದೆ. ಆಗಾಗ ಹೆದ್ದಾರಿಯಲ್ಲೇ ಚಿರತೆಗಳು ಪ್ರತ್ಯಕ್ಷವಾಗಿ ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸಿರುವ ಉದಾಹರಣೆಗಳಿವೆ.

​ಇಂತಹ ಸನ್ನಿವೇಶದಲ್ಲಿ, ಕಡಿದಾದ ತಿರುವಿನ ತಡೆಗೋಡೆಯ ಮೇಲೆ ಕಾಲು ಚಾಚಿ ಮಲಗಿರುವ ಈ ವ್ಯಕ್ತಿ, ಯಾವುದೇ ಕ್ಷಣದಲ್ಲೂ ಕಾಡುಪ್ರಾಣಿಯ ದಾಳಿಗೆ ತುತ್ತಾಗುವ ಅಥವಾ ಆಕಸ್ಮಿಕವಾಗಿ ಪ್ರಪಾತಕ್ಕೆ ಬಿದ್ದು ಜೀವ ಕಳೆದುಕೊಳ್ಳುವ ಭೀಕರ ಅಪಾಯ ಎದುರಾಗಿದೆ.

​ತಕ್ಷಣದ ರಕ್ಷಣೆಗೆ ಆಗ್ರಹ:

ಯಾವುದೇ ಅನಾಹುತ ಸಂಭವಿಸಿ ಪ್ರಾಣಹಾನಿಯಾಗುವ ಮುನ್ನ ಸಂಬಂಧಪಟ್ಟ ಅರಣ್ಯ ಇಲಾಖೆ ಹಾಗೂ ಪೊಲೀಸ್ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ, ಈ ಅಪರಿಚಿತ ವ್ಯಕ್ತಿಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಬೇಕಾಗಿ ಸಾರ್ವಜನಿಕರು ಹಾಗೂ ಭಕ್ತಾದಿಗಳು ತೀವ್ರವಾಗಿ ಆಗ್ರಹಿಸಿದ್ದಾರೆ.

ವರದಿ :- ಶಾರುಕ್ ಖಾನ್ ಹನೂರು


Share News

Related Articles

Leave a Reply

Your email address will not be published. Required fields are marked *

Back to top button
error: Content is protected !!