ಜಿಲ್ಲಾ ಸುದ್ದಿಕ್ರೈಂ ಸುದ್ದಿಟ್ರೆಂಡಿಂಗ್ ಸುದ್ದಿಗಳುತಾಲೂಕುರಾಜ್ಯ ಸುದ್ದಿಸೋಶಿಯಲ್ ಮೀಡಿಯಾ ಅಪ್ಡೇಟ್ಸ್ಸ್ಥಳೀಯ ಸುದ್ದಿಗಳು

ಪಶು ವೈದ್ಯಾಧಿಕಾರಿ ನೇಮಕಾತಿ ಅಕ್ರಮ: ಚನ್ನಮ್ಮನ ಕಿತ್ತೂರಿನಲ್ಲಿ ಜಾರಿ ನಿರ್ದೇಶನಾಲಯ (ED) ಕಾರ್ಯಾಚರಣೆ

Share News

ಚನ್ನಮ್ಮನ ಕಿತ್ತೂರು : ಕರ್ನಾಟಕ ಲೋಕಸೇವಾ ಆಯೋಗದ (KPSC) ಪಶು ವೈದ್ಯಾಧಿಕಾರಿಗಳ ನೇಮಕಾತಿ ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳು ಮಂಗಳವಾರ ಮುಂಜಾನೆ ಪಟ್ಟಣದಲ್ಲಿ ದಿಢೀರ್‌ ದಾಳಿ ನಡೆಸಿ ಸುದೀರ್ಘ ವಿಚಾರಣೆ ನಡೆಸಿದ್ದಾರೆ. ಪಟ್ಟಣದ ಸದಾಶಿವ ನಗರದ ಬೀಡಿ ಮಾರ್ಗದಲ್ಲಿರುವ ಕುಬೇರ ಜಾಯಕ್ಕನವರ ಅವರ ನಿವಾಸದ ಮೇಲೆ ಈ ದಾಳಿ ನಡೆದಿದೆ.

​ಕಡತಗಳ ಶೋಧ ಮತ್ತು ಸುದೀರ್ಘ ವಿಚಾರಣೆ

ಬೆಳ್ಳಂಬೆಳಗ್ಗೆ ನಿವಾಸಕ್ಕೆ ಆಗಮಿಸಿದ ಇಡಿ ಅಧಿಕಾರಿಗಳ ತಂಡವು ಹಲವು ಗಂಟೆಗಳ ಕಾಲ ಸುದೀರ್ಘ ಪರಿಶೀಲನೆ ನಡೆಸಿತು. ಮನೆಗಳಲ್ಲಿದ್ದ ಕಡತಗಳು, ದಾಖಲೆಗಳು ಹಾಗೂ ಪ್ರಮುಖ ಮಾಹಿತಿಗಳನ್ನು ಅಧಿಕಾರಿಗಳು ಕೂಲಂಕಷವಾಗಿ ಪರಿಶೀಲಿಸಿ ಮಾಹಿತಿ ಕಲೆಹಾಕಿದರು.

​ಸಹೋದರಿಯ ಪುತ್ರನ ಭಾಗಿಯಾದ ಶಂಕೆ

ಕೆಪಿಎಸ್‌ಸಿ ಪಶು ವೈದ್ಯಾಧಿಕಾರಿ ಪರೀಕ್ಷಾ ಹಗರಣದಲ್ಲಿ ಕುಬೇರ ಜಾಯಕ್ಕನವರ ಅವರ ಸಹೋದರಿಯ ಪುತ್ರ ಅಭಿಷೇಕ ಮಹಾದೇವ ದೇವಲಾಪುರ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಇಡಿ ಅಧಿಕಾರಿಗಳು ತನಿಖೆಯನ್ನು ತೀವ್ರಗೊಳಿಸಿದ್ದಾರೆ.

​ಇಡಿ ಅಧಿಕಾರಿಗಳ ತಂಡವು ಮೊದಲು ಗೋಕಾಕ ತಾಲ್ಲೂಕಿನ ಘಟಪ್ರಭಾದಲ್ಲಿರುವ ಅಭಿಷೇಕ ಅವರ ನಿವಾಸಕ್ಕೆ ಶೋಧಕ್ಕೆ ತೆರಳಿತ್ತು. ಆದರೆ, ಆತನ ಪೋಷಕರು ಚನ್ನಮ್ಮನ ಕಿತ್ತೂರಿನಲ್ಲಿರುವ ಸಂಬಂಧಿಕರ ಮನೆಯಲ್ಲಿ ತಂಗಿರುವ ಮಾಹಿತಿ ಸಿಕ್ಕ ತಕ್ಷಣವೇ ಅಧಿಕಾರಿಗಳು ಇಲ್ಲಿಗೆ ಧಾವಿಸಿ ಪರಿಶೀಲನೆ ನಡೆಸಿದರು.

​ಸಿಆರ್‌ಪಿಎಫ್ ಸಶಸ್ತ್ರ ಯೋಧರ ಬಿಗಿ ಭದ್ರತೆ

ದಾಳಿ ಮತ್ತು ತಪಾಸಣೆ ವೇಳೆ ಯಾವುದೇ ರೀತಿಯ ಅಹಿತಕರ ಘಟನೆಗಳು ಅಥವಾ ಪ್ರತಿಭಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿತ್ತು. ಇಬ್ಬರು ಇಡಿ ಹಿರಿಯ ಅಧಿಕಾರಿಗಳೊಂದಿಗೆ ಮೂವರು ಸಿಆರ್‌ಪಿಎಫ್ (CRPF) ಸಶಸ್ತ್ರ ಯೋಧರು ತಪಾಸಣೆ ಸ್ಥಳದಲ್ಲಿ ಬಿಗಿ ಭದ್ರತೆ ಒದಗಿಸಿದ್ದರು.


Share News

Related Articles

Leave a Reply

Your email address will not be published. Required fields are marked *

Back to top button
error: Content is protected !!