ಉಪಯುಕ್ತ ಮಾಹಿತಿಗಳುಜಿಲ್ಲಾ ಸುದ್ದಿಟ್ರೆಂಡಿಂಗ್ ಸುದ್ದಿಗಳುತಾಲೂಕುರಾಜ್ಯ ಸುದ್ದಿಸೋಶಿಯಲ್ ಮೀಡಿಯಾ ಅಪ್ಡೇಟ್ಸ್ಸ್ಥಳೀಯ ಸುದ್ದಿಗಳು
ಲಾರಿಯಿಂದ ಕೆಳಗೆ ಬಿದ್ದ ಬೃಹತ್ ಕಂಟೈನರ್: ಮೈಸೂರು-ಚೆನ್ನರಾಯಪಟ್ಟಣ ಹೆದ್ದಾರಿ ಸಂಚಾರ ಅಸ್ತವ್ಯಸ್ತ

ಕೆ.ಆರ್.ಪೇಟೆ (ಮಂಡ್ಯ): ಚಲಿಸುತ್ತಿದ್ದ ಲಾರಿಯಿಂದ ಭಾರಿ ಗಾತ್ರದ ಕಂಟೈನರ್ ರಸ್ತೆಗೆ ಬಿದ್ದ ಪರಿಣಾಮ ಮೈಸೂರು-ಚೆನ್ನರಾಯಪಟ್ಟಣ ರಾಜ್ಯ ಹೆದ್ದಾರಿಯಲ್ಲಿ ವಾಹನ ಸಂಚಾರ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡ ಘಟನೆ ಸಂಭವಿಸಿದೆ.
ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಮುರುಕನಹಳ್ಳಿ ಬಳಿ ಈ ಘಟನೆ ನಡೆದಿದೆ. ರಾಜಸ್ಥಾನದ ಅಜ್ಮೀರ್‌ನಿಂದ ಮೈಸೂರು ಜಿಲ್ಲೆಯ ನಂಜನಗೂಡು ಕೈಗಾರಿಕಾ ಪ್ರದೇಶಕ್ಕೆ ಕಂಟೈನರ್ ಸಾಗಿಸಲಾಗುತ್ತಿತ್ತು. ಮುರುಕನಹಳ್ಳಿ ಬಳಿ ತಲುಪುತ್ತಿದ್ದಂತೆ ರಸ್ತೆ ಬದಿಯ ಮರಕ್ಕೆ ತಗುಲಿ, ಲಾರಿಯ ಮೇಲಿದ್ದ ಬೃಹತ್ ಕಂಟೈನರ್ ದಿಢೀರನೆ ರಸ್ತೆಗೆ ಉರುಳಿ ಬಿದ್ದಿದೆ.
ಕಂಟೈನರ್ ಅತ್ಯಂತ ಭಾರಿ ಗಾತ್ರದ್ದಾಗಿದ್ದರಿಂದ ಅದನ್ನು ತೆರವುಗೊಳಿಸುವ ಕಾರ್ಯಾಚರಣೆಗೆ ಹೆಚ್ಚಿನ ಸಮಯ ಹಿಡಿದಿದ್ದು, ರಸ್ತೆಯಿಡೀ ಬಂದ್ ಆಗಿ ವಾಹನ ಸವಾರರು ಹಾಗೂ ಪ್ರಯಾಣಿಕರು ತೀವ್ರ ಪರದಾಡುವಂತಾಯಿತು. ತೆರವು ಕಾರ್ಯಾಚರಣೆ ವಿಳಂಬವಾದ ಹಿನ್ನೆಲೆಯಲ್ಲಿ ಪೊಲೀಸರು ಹಾಗೂ ಸ್ಥಳೀಯ ಆಡಳಿತ ವಾಹನಗಳ ಸುಗಮ ಸಂಚಾರಕ್ಕಾಗಿ ಬದಲಿ ಮಾರ್ಗದ ವ್ಯವಸ್ಥೆ ಮಾಡಿದರು.



