ಅಮಾಯಕರ ಪ್ರಾಣ ರಕ್ಷಣೆಯೇ ಮುಖ್ಯ ಗುರಿ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀ ಪ್ರದೀಪ್ ಗುಂಟಿ (ಐ.ಪಿ.ಎಸ್) ನಿರ್ದೇಶನದಂತೆ ಕಾರ್ಯಾಚರಣೆ

ಬೀದರ: ರಸ್ತೆ ಅಪಘಾತಗಳನ್ನು ತಡೆಗಟ್ಟಿ ಸಾರ್ವಜನಿಕರ ಹಾಗೂ ವಾಹನ ಸವಾರರ ಅಮೂಲ್ಯ ಪ್ರಾಣ ರಕ್ಷಿಸುವ ನಿಟ್ಟಿನಲ್ಲಿ ಬೀದರ ಜಿಲ್ಲಾ ಪೊಲೀಸರು ಮಹತ್ವದ ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ. ಧನ್ನೂರ ಪೊಲೀಸ್ ಠಾಣಾ ವ್ಯಾಪ್ತಿಯ ಅಪಾಯಕಾರಿ ಹಾಗೂ ಅತೀ ವೇಗದ ರಸ್ತೆಗಳಲ್ಲಿ ಬ್ಯಾರಲ್ ಮತ್ತು ಬ್ಯಾರಿಕೇಡ್ಗಳನ್ನು ಅಳವಡಿಸಲಾಗಿದೆ.
ಬೀದರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀ ಪ್ರದೀಪ್ ಗುಂಟಿ, ಐ.ಪಿ.ಎಸ್ ರವರ ನಿರ್ದೇಶನದಂತೆ, ಧನ್ನೂರ ಪೊಲೀಸ್ ಠಾಣೆಯ ಪಿ.ಎಸ್.ಐ ಶ್ರೀ ರಾಜಕುಮಾರ ಹಾಗೂ ಅವರ ಸಿಬ್ಬಂದಿ ತಂಡವು ಈ ಕಾರ್ಯಾಚರಣೆ ನಡೆಸಿದೆ.
ಸ್ಥಳ ಪರಿಶೀಲನೆ: ಧನ್ನೂರ ಠಾಣಾ ವ್ಯಾಪ್ತಿಯಲ್ಲಿ ವಾಹನಗಳು ಅತಿಯಾದ ವೇಗದಿಂದ ಚಲಿಸುವ ಹಾಗೂ ಅಪಘಾತ ಸಂಭವಿಸುವ ಸಂಭಾವ್ಯ ಸ್ಥಳಗಳನ್ನು ಮೊದಲು ಗುರುತಿಸಲಾಯಿತು.
ವೇಗ ನಿಯಂತ್ರಣ ಕ್ರಮ: ಗುರುತಿಸಲಾದ ಅಪಾಯಕಾರಿ ಸ್ಥಳಗಳಲ್ಲಿ ವಾಹನಗಳ ವೇಗಕ್ಕೆ ತಡೆ ಹಾಕಲು ಬ್ಯಾರಿಕೇಡ್ ಹಾಗೂ ಬ್ಯಾರಲ್ಗಳನ್ನು ಆಯಕಟ್ಟಿನ ಸ್ಥಳಗಳಲ್ಲಿ ಅಳವಡಿಸಲಾಗಿದೆ.
ಮುಖ್ಯ ಉದ್ದೇಶ: ಅತಿಯಾದ ವೇಗಕ್ಕೆ ಕಡಿವಾಣ ಹಾಕಿ, ಸಂಭಾವ್ಯ ರಸ್ತೆ ಅಪಘಾತಗಳನ್ನು ತಪ್ಪಿಸಿ ಅಮಾಯಕರ ಪ್ರಾಣ ರಕ್ಷಿಸುವುದು.
ರಸ್ತೆ ಸುರಕ್ಷತೆ ಮತ್ತು ಅಪಘಾತ ತಡೆಯುವ ನಿಟ್ಟಿನಲ್ಲಿ ಸಮಯೋಚಿತವಾಗಿ ಮುಂಜಾಗ್ರತಾ ಕ್ರಮ ಕೈಗೊಂಡ ಧನ್ನೂರ ಪೊಲೀಸ್ ಠಾಣೆಯ ಪಿ.ಎಸ್.ಐ ರಾಜಕುಮಾರ ಹಾಗೂ ಸಿಬ್ಬಂದಿಯವರ ಜನಪರ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
”ಜನ ಸಾಮಾನ್ಯರ ಪ್ರಾಣ ರಕ್ಷಣೆಯೇ ನಮ್ಮ ಮುಖ್ಯ ಗುರಿ. ಬೀದರ ಜಿಲ್ಲಾ ಪೊಲೀಸ್ ಸದಾ ನಿಮ್ಮ ಸೇವೆಯಲ್ಲಿ ಇರಲಿದೆ.”
— ಪ್ರದೀಪ್ ಗುಂಟಿ, ಐ.ಪಿ.ಎಸ್., ಪೊಲೀಸ್ ವರಿಷ್ಠಾಧಿಕಾರಿಗಳು, ಬೀದರ ಜಿಲ್ಲೆ.



