ಹೊಸೂರು ರಸ್ತೆ – ಬರ್ಲಿ ಸ್ಟ್ರೀಟ್ನಲ್ಲಿ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆ

ಬೆಂಗಳೂರು: ಸಾರ್ವಜನಿಕರ ಹಾಗೂ ಪಾದಚಾರಿಗಳ ಸುರಕ್ಷಿತ ಮತ್ತು ಸುಗಮ ಸಂಚಾರವನ್ನು ಖಚಿತಪಡಿಸುವ ನಿಟ್ಟಿನಲ್ಲಿ ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಶಾಂತಿನಗರ ವಿಭಾಗದ ವತಿಯಿಂದ ಹೊಸೂರು ರಸ್ತೆ – ಬರ್ಲಿ ಸ್ಟ್ರೀಟ್ ಬಳಿ ಬೃಹತ್ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಡೆಸಲಾಯಿತು.
ಪಾದಚಾರಿ ಮಾರ್ಗಗಳನ್ನು ಅಕ್ರಮವಾಗಿ ಆಕ್ರಮಿಸಿಕೊಂಡಿದ್ದ ಅಂಗಡಿ-ಮುಂಗಟ್ಟುಗಳು ಹಾಗೂ ತಾತ್ಕಾಲಿಕ ಶೇಡ್ಗಳನ್ನು ಪಾಲಿಕೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ತೆರವುಗೊಳಿಸಿದರು.
ಅಕ್ರಮ ಒತ್ತುವರಿ ತೆರವು: ಬರ್ಲಿ ಸ್ಟ್ರೀಟ್ ಭಾಗದ ಪಾದಚಾರಿ ಮಾರ್ಗದ ಮೇಲಿದ್ದ ಎಲ್ಲಾ ರೀತಿಯ ಅಕ್ರಮ ಒತ್ತುವರಿಗಳನ್ನು ತೆರವುಗೊಳಿಸಿ, ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಯಿತು.
ಸುರಕ್ಷಿತ ಪಾದಚಾರಿ ಸಂಚಾರ: ಪಾದಚಾರಿಗಳು ಯಾವುದೇ ಅಡೆತಡೆಯಿಲ್ಲದೆ, ಸುರಕ್ಷಿತವಾಗಿ ರಸ್ತೆಯ ಪಕ್ಕದಲ್ಲಿ ಸಂಚರಿಸಲು ಮಾರ್ಗವನ್ನು ಮುಕ್ತಗೊಳಿಸಲಾಯಿತು.
ವ್ಯಾಪಾರಿಗಳಿಗೆ ಮುನ್ನೆಚ್ಚರಿಕೆ: ಸಾರ್ವಜನಿಕ ರಸ್ತೆ ಹಾಗೂ ಪಾದಚಾರಿ ಮಾರ್ಗಗಳನ್ನು ಪುನಃ ಒತ್ತುವರಿ ಮಾಡಿಕೊಳ್ಳದಂತೆ ಮತ್ತು ಪಾದಚಾರಿಗಳ ಹಕ್ಕನ್ನು ಕಸಿಯದಂತೆ ಸ್ಥಳೀಯ ವ್ಯಾಪಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಯಿತು.
ಪಾದಚಾರಿ ಮಾರ್ಗಗಳನ್ನು ಸದಾ ಸಾರ್ವಜನಿಕ ಬಳಕೆಗೆ ಮುಕ್ತವಾಗಿರಿಸುವ ಉದ್ದೇಶದಿಂದ ನಗರ ಪಾಲಿಕೆಯು ಈ ರೀತಿಯ ಕಾರ್ಯಾಚರಣೆಗಳನ್ನು ನಿಯಮಿತವಾಗಿ ಮುಂದುವರಿಸಲಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.



