ಜಿಲ್ಲಾ ಸುದ್ದಿತಾಲೂಕುರಾಜ್ಯ ಸುದ್ದಿಸ್ಥಳೀಯ ಸುದ್ದಿಗಳು

ನೀರಾವರಿ ಇಲಾಖೆಯ ಜಾಗ ಒತ್ತುವರಿ ಮಾಡಿ ಸಮಾಧಿ ಕಟ್ಟಡ ನಿರ್ಮಾಣ , ಮೌನಕ್ಕೆ ಜಾರಿದ ಅಧಿಕಾರಿಗಳು 

Share News

ಕಾರಟಗಿ ; ಸಮಾಧಿ ಕಟ್ಟಡ ನಿರ್ಮಾಣ ಕಾರ್ಯ ಜರುಗದಂತೆ ನೀರಾವರಿ ಆಸ್ತಿ ಒತ್ತುವರಿಯಾಗದಂತೆ ಸಾರ್ವಜನಿಕ ಹಿತಾ ಶಕ್ತಿಗಾಗಿ ಅತೀ ತುರ್ತಾಗಿ ಕ್ರಮ ಕೈಗೊಳ್ಳುವಂತೆ ದಲಿತ ಮುಖಂಡ ಮೌನೇಶ್ ಭಜರಂಗಿ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರು ಕರ್ನಾಟಕ ನೀರಾವರಿ ನಿಗಮ ಉಪ ವಿಭಾಗ 32 ನೆಯ ವಿತರಣಾ ಕಾಲುವೆಯವರಲ್ಲಿ

ಒತ್ತಾಯಿಸಿದ್ದಾರೆ.

ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಕಾರಟಗಿ ಹೋಬಳಿಯ ಪನ್ನಾಪುರ ಸೀಮೆಯ ಸರ್ವೇ ನಂಬರ್ 41ರಲ್ಲಿನ ಒಟ್ಟು ಜಮೀನು 22 ಎಕರೆ 15 ಗುಂಟೆ ಪೈಕಿ 1979 ರಲ್ಲಿ 01 ಎಕರೆ 18 ಗುಂಟೆ ಜಮೀನು ನೀರಾವರಿ ಇಲಾಖೆಯ ವ್ಯಾಪ್ತಿಯ ಕಾಲುವೆಗೆ ಮೀಸಲಿರಿಸಲಾಗಿರುತ್ತದೆ.ಅಲ್ಲದೆ ನೀರಾವರಿ ಕಾಲುವೆ ಮಧ್ಯಭಾಗದಿಂದ ಬಲಭಾಗಕ್ಕೆ 99 ಫೀಟ್ ನೀರಾವರಿ ಇಲಾಖೆಗೆ ಸೇರಿರುತ್ತದೆ.

ಆದರೆ ಸರ್ವೇ ನಂಬರ್ 41 ರಲ್ಲಿ ಗ್ರಾಮದ ವೆಂಕೋಬ ಎನ್ನುವವರು ನೀರಾವರಿ ಇಲಾಖೆಯ ಸ್ಥಳ ಒತ್ತುವರಿ ಮಾಡಿಕೊಂಡು ಅವರ ತಂದೆಯರ ಸಮಾಧಿಯನ್ನು ಸಿಮೆಂಟ್ ಕಾಂಕ್ರೀಟ್ ಪಿಲ್ಲರ್ ಗಳ ಮೂಲಕ ನಿರ್ಮಿಸಲು ಮುಂದಾಗಿರುತ್ತಾರೆ. ಇದನ್ನು ಅಧಿಕಾರಿಗಳಾದ ನೀವು ಸಮಾಧಿಯನ್ನು ನಿರ್ಮಿಸದಂತೆ ಕ್ರಮ ಕೈಗೊಳ್ಳಬೇಕು.

ಈಗಾಗಲೆ ಗ್ರಾಮದ ಸಾರ್ವಜನಿಕ ಸ್ಮಶಾನವನ್ನು ಗ್ರಾಮದ ಸರ್ವೇ ನಂಬರ್ 40 ಮೀಸಲಿರಿಸಲಾಗಿರುತ್ತದೆ. ಆದರೆ ಬಸವಣ್ಯ ಕ್ಯಾಂಪಿನ ವೆಂಕೋಬ ಅವರ ತಂದೆಯ ಸಮಾಧಿಯನ್ನು ಈಗಾಗಲೇ ನೀರಾವರಿ ಇಲಾಖೆಯ ವ್ಯಾಪಿಗೆ ಸೇರಿದ ಸರ್ವೇ ನಂಬರ್ 41ರಲ್ಲಿ ನಿರ್ಮಾಣ ಮಾಡುತ್ತಿರುವುದು ನೀರಾವರಿ ಆಸ್ತಿಯನ್ನು ಒತ್ತುವರಿ ಮಾಡಲಾಗುತ್ತಿದೆ. ಕಾರಣ ನೀರಾವರಿ ಇಲಾಖೆಯ ಆಸ್ತಿಯ ಒತ್ತುವರಿ ತೆರವುಗೊಳಿಸಿ ನೀರಾವರಿ ಇಲಾಖೆಯ ಆಸ್ತಿಯನ್ನು ರಕ್ಷಿಸಬೇಕು ಮತ್ತು ಸಾರ್ವಜನಿಕ ಹಿತಾ ಶಕ್ತಿಯನ್ನು ಕಾಪಾಡಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.


Share News

Related Articles

Leave a Reply

Your email address will not be published. Required fields are marked *

Back to top button
error: Content is protected !!