ಉಪಯುಕ್ತ ಮಾಹಿತಿಗಳುಜಿಲ್ಲಾ ಸುದ್ದಿಟ್ರೆಂಡಿಂಗ್ ಸುದ್ದಿಗಳುತಾಲೂಕುರಾಜ್ಯ ಸುದ್ದಿಸೋಶಿಯಲ್ ಮೀಡಿಯಾ ಅಪ್ಡೇಟ್ಸ್

ರಾಣೇಬೆನ್ನೂರು: ಕಮದೋಡ-ಚಳಗೇರಿ-ಕವಲೇತ್ತು ಸೇತುವೆಗಳಲ್ಲಿ ಕತ್ತಲೆಯ ಸಾಮ್ರಾಜ್ಯ — ತಕ್ಷಣದ ಕ್ರಮಕ್ಕೆ ಸಾರ್ವಜನಿಕರ ಆಗ್ರಹ

Share News

ರಾಣೇಬೆನ್ನೂರು: ತಾಲೂಕಿನ ರಾಷ್ಟ್ರೀಯ ಹೆದ್ದಾರಿ-69ರಲ್ಲಿ ಬರುವ ಕಮದೋಡ, ಚಳಗೇರಿ ಹಾಗೂ ಕವಲೇತ್ತು ಗ್ರಾಮಗಳ ವ್ಯಾಪ್ತಿಯ ಬ್ರಿಡ್ಜ್‌ಗಳಲ್ಲಿ (ಸೇತುವೆಗಳಲ್ಲಿ) ಸಮರ್ಪಕ ವಿದ್ಯುತ್ ದೀಪಗಳ ವ್ಯವಸ್ಥೆ ಇಲ್ಲದೆ ವಾಹನ ಸವಾರರು ಕತ್ತಲಲ್ಲಿಯೇ ಸಂಚರಿಸುವಂತಾಗಿದ್ದು, ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

​ಹೆಚ್ಚಿದ ಅಪಘಾತದ ಭೀತಿ:

ಈ ಭಾಗವು ಚಳಗೇರಿ ಟೋಲ್ ಪ್ಲಾಜಾ ವ್ಯಾಪ್ತಿಗೆ ಒಳಪಡಲಿದ್ದು, ರಾಷ್ಟ್ರೀಯ ಹೆದ್ದಾರಿಯಲ್ಲಿ ಹಗಲು-ರಾತ್ರಿ ನಿರಂತರ ವಾಹನ ಸಂಚಾರವಿರುತ್ತದೆ. ಆದರೆ, ರಾತ್ರಿ ವೇಳೆ ಸೇತುವೆಗಳ ಮೇಲೆ ಬೆಳಕಿನ ವ್ಯವಸ್ಥೆ ಇಲ್ಲದಿರುವುದರಿಂದ ದ್ವಿಚಕ್ರ ವಾಹನ ಸವಾರರು ಹಾಗೂ ಪಾದಚಾರಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದು, ಯಾವುದೇ ಕ್ಷಣದಲ್ಲಾದರೂ ಭೀಕರ ಅಪಘಾತಗಳು ಸಂಭವಿಸುವ ಆತಂಕ ಎದುರಾಗಿದೆ.

​ಆಗ್ರಹ ಮತ್ತು ಮನವಿ:

ಟೋಲ್ ಸುಂಕ ವಸೂಲಿ ಮಾಡುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಸಂಬಂಧಿಸಿದ ಟೋಲ್ ನಿರ್ವಹಣಾ ಸಂಸ್ಥೆಯು ಕೂಡಲೇ ಸ್ಥಳ ಪರಿಶೀಲನೆ ನಡೆಸಿ, ಕತ್ತಲಾವರಿಸಿರುವ ಸೇತುವೆಗಳ ಮೇಲೆ ತುರ್ತಾಗಿ ವಿದ್ಯುತ್ ದೀಪಗಳನ್ನು ಅಳವಡಿಸಬೇಕು. ಸಾರ್ವಜನಿಕರ ಜೀವ ರಕ್ಷಣೆಗೆ ಆದ್ಯತೆ ನೀಡಿ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಸ್ಥಳೀಯರು ಹಾಗೂ ವಾಹನ ಸವಾರರು ಒತ್ತಾಯಿಸಿದ್ದಾರೆ.


Share News

Related Articles

Leave a Reply

Your email address will not be published. Required fields are marked *

Back to top button
error: Content is protected !!