ಜಿಲ್ಲಾ ಸುದ್ದಿಕ್ರೈಂ ಸುದ್ದಿಟ್ರೆಂಡಿಂಗ್ ಸುದ್ದಿಗಳುತಾಲೂಕುರಾಜ್ಯ ಸುದ್ದಿಸೋಶಿಯಲ್ ಮೀಡಿಯಾ ಅಪ್ಡೇಟ್ಸ್

೪೦ ಕಿ.ಮೀ ಸಿನಿಮೀಯ ಚೇಸಿಂಗ್: ಅಂತಾರಾಜ್ಯ ದನಗಳ್ಳರ ಗ್ಯಾಂಗ್‌ಗೆ ಯಾದಗಿರಿ ಪೊಲೀಸರ ಬಿಗ್ ಶಾಕ್!

Share News

ಯಾದಗಿರಿ : ಕಳೆದ ಎರಡು ವರ್ಷಗಳಿಂದ ರೈತರ ನಿದ್ದೆಗೆಡಿಸಿದ್ದ ಅಂತಾರಾಜ್ಯ ದನಗಳ್ಳರ ಗ್ಯಾಂಗ್‌ನ್ನು ಯಾದಗಿರಿ ಪೊಲೀಸರು ಅತ್ಯಂತ ಸಾಹಸಿಕ ಹಾಗೂ ಸಿನಿಮೀಯ ಶೈಲಿಯ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

​ದನಗಳನ್ನು ಕಳ್ಳತನ ಮಾಡಿ ಸ್ಕಾರ್ಪಿಯೋ ವಾಹನದಲ್ಲಿ ಪರಾರಿಯಾಗುತ್ತಿದ್ದ ಆರೋಪಿಗಳನ್ನು ಸುಮಾರು ೪೦ ಕಿ.ಮೀ. ದೂರದವರೆಗೆ ಬೆನ್ನಟ್ಟಿದ ಪೊಲೀಸರು, ಯರಗೋಳ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ತಡೆದು ಆರು ಮಂದಿಯನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

​ಖತರ್ನಾಕ್ ಕಳ್ಳರ ಕೃತ್ಯ ಹಾಗೂ ಕಾರ್ಯಾಚರಣೆ ವಿವರ:

​ಕೃತ್ಯದ ಶೈಲಿ: ಮನೆ ಅಥವಾ ಕೊಟ್ಟಿಗೆಯಲ್ಲಿನ ರಾಸುಗಳಿಗೆ ಅರಿವಳಿಕೆ ಇಂಜೆಕ್ಷನ್ ನೀಡಿ, ಕಪ್ಪು ಸ್ಕಾರ್ಪಿಯೋ ವಾಹನದಲ್ಲಿ ಕಸಾಯಿಖಾನೆಗಳಿಗೆ ಸಾಗಿಸುತ್ತಿದ್ದರು.

​ಕಲಬುರಗಿ ಸಂಪರ್ಕ: ಕಳ್ಳತನದ ಬಳಿಕ ಆರೋಪಿಗಳು ಕಲಬುರಗಿ ಭಾಗದಲ್ಲಿ ತಾತ್ಕಾಲಿಕವಾಗಿ ನೆಲೆಸುತ್ತಿದ್ದರು.

​ಸಾಹಸಿಕ ಬೆನ್ನಟ್ಟುವಿಕೆ: ವಡಗೇರ ಹಾಗೂ ಯಾದಗಿರಿ ಗ್ರಾಮಾಂತರ ಠಾಣೆ ಪೊಲೀಸರು ಖಚಿತ ಮಾಹಿತಿ ಆಧರಿಸಿ ಜಂಟಿ ಕಾರ್ಯಾಚರಣೆ ನಡೆಸಿ ೪೦ ಕಿ.ಮೀ. ಚೇಸ್ ಮಾಡಿದರು.

​ಜೆಸಿಬಿ ಅಡ್ಡಲಾಗಿಟ್ಟು ತಡೆ: ಆರೋಪಿಗಳು ವಾಹನ ನಿಲ್ಲಿಸದೆ ವೇಗ ಹೆಚ್ಚಿಸಿದಾಗ, ಯರಗೋಳ ಬಳಿ ರಸ್ತೆಗೆ ಅಡ್ಡಲಾಗಿ ಜೆಸಿಬಿ ಹಾಗೂ ಟ್ರ್ಯಾಕ್ಟರ್ ನಿಲ್ಲಿಸಿ ವಾಹನವನ್ನು ತಡೆಯಲಾಯಿತು. ರಭಸವಾಗಿ ಡಿಕ್ಕಿ ಹೊಡೆದ ಸ್ಕಾರ್ಪಿಯೋ ಜಖಂಗೊಂಡಿದ್ದು, ಆರೋಪಿಗಳನ್ನು ಸ್ಥಳದಲ್ಲೇ ವಶಕ್ಕೆ ಪಡೆಯಲಾಯಿತು.

​ಬಂಧಿತ ಆರೋಪಿಗಳು:

ಹರಿಯಾಣ ಮೂಲದ ಸಮೂನ್, ಅನಿಬ್, ಇರ್ಷಾದ್, ನಪೀಸ್, ಅಜೀಮ್ ಹಾಗೂ ರಾಜಸ್ಥಾನ ಮೂಲದ ನಿತಿನ್ ಬಂಧಿತ ಕಳ್ಳರು.

​ವಡಗೇರ ಸೇರಿದಂತೆ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಹತ್ತಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ಆರೋಪಿಗಳ ಹಿನ್ನೆಲೆ ಹಾಗೂ ಜಾಲದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಸಾರ್ವಜನಿಕರು ಪೊಲೀಸರ ಸಮಯಪ್ರಜ್ಞೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ರೈತರು ನಿಟ್ಟುಸಿರು ಬಿಟ್ಟಿದ್ದಾರೆ.


Share News

Related Articles

Leave a Reply

Your email address will not be published. Required fields are marked *

Back to top button
error: Content is protected !!