ಜಿಲ್ಲಾ ಸುದ್ದಿಟ್ರೆಂಡಿಂಗ್ ಸುದ್ದಿಗಳುತಾಲೂಕುರಾಜ್ಯ ಸುದ್ದಿಸೋಶಿಯಲ್ ಮೀಡಿಯಾ ಅಪ್ಡೇಟ್ಸ್

ಯಲ್ಲಾಪುರ ಠಾಣೆಗೆ ನೂತನ ಪಿಐ ಆಗಿ ಸುರೇಶ ಕುಂಬಾರ್ ನೇಮಕ

Share News

ಯಲ್ಲಾಪುರ: ಯಲ್ಲಾಪುರ ಪೊಲೀಸ್ ಠಾಣೆಯ ನೂತನ ಪೊಲೀಸ್ ನಿರೀಕ್ಷಕರಾಗಿ (ಪಿಐ) ಸುರೇಶ ಜಿ. ಕುಂಬಾರ್ ಅವರು ಗುರುವಾರ ಅಧಿಕಾರ ಸ್ವೀಕರಿಸಿದರು.

​ಅಧಿಕಾರ ವಹಿಸಿಕೊಂಡ ಬಳಿಕ ಮಾತನಾಡಿದ ಅವರು, ತಾಲೂಕಿನಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡುವುದು ಹಾಗೂ ಸಾರ್ವಜನಿಕರ ಸುರಕ್ಷತೆಗೆ ಮೊದಲ ಆದ್ಯತೆ ನೀಡಲಾಗುವುದು. ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಮುಕ್ತವಾಗಿ ಪೊಲೀಸರ ಗಮನಕ್ಕೆ ತರಬಹುದು ಎಂದು ತಿಳಿಸಿದರು.

​ಇಲಾಖೆಯಲ್ಲಿ ಸುದೀರ್ಘ ಸೇವಾನುಭವ ಹೊಂದಿರುವ ಸುರೇಶ ಕುಂಬಾರ್ ಅವರು ಈ ಹಿಂದೆ ಹುಬ್ಬಳ್ಳಿ, ಮಂಗಳೂರು ಹಾಗೂ ಉಡುಪಿ ಜಿಲ್ಲೆಗಳಲ್ಲಿ ವಿವಿಧ ಹುದ್ದೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ದಕ್ಷತೆ ಮತ್ತು ಜನಸ್ನೇಹಿ ಆಡಳಿತಕ್ಕೆ ಹೆಸರಾಗಿರುವ ಇವರ ಆಗಮನದಿಂದ ಯಲ್ಲಾಪುರ ಠಾಣೆಯ ಕಾರ್ಯಚಟುವಟಿಕೆಗಳಿಗೆ ಮತ್ತಷ್ಟು ವೇಗ ಸಿಗುವ ನಿರೀಕ್ಷೆಯಿದೆ.

​ಹಿಂದಿದ್ದ ಪಿಐ ರಮೇಶ ಹಾನಾಪುರ ಅವರು ಮುಂಡಗೋಡ ಠಾಣೆಗೆ ವರ್ಗಾವಣೆಯಾದ ನಂತರ ಕಳೆದ ಕೆಲವು ತಿಂಗಳಿಂದ ಈ ಹುದ್ದೆ ಖಾಲಿಯಿತ್ತು. ಇದೀಗ ನೂತನ ಪಿಐ ನೇಮಕವಾಗಿದ್ದು, ಅಪರಾಧ ತಡೆ ಹಾಗೂ ಕಾನೂನು ಸುವ್ಯವಸ್ಥೆ ಪಾಲನೆಯಲ್ಲಿ ಅವರ ಮುಂದಿನ ಕಾರ್ಯವೈಖರಿಯತ್ತ ತಾಲೂಕಿನ ಜನರ ಗಮನ ನೆಟ್ಟಿದೆ.


Share News

Related Articles

Leave a Reply

Your email address will not be published. Required fields are marked *

Back to top button
error: Content is protected !!