ಉಪಯುಕ್ತ ಮಾಹಿತಿಗಳುಜಿಲ್ಲಾ ಸುದ್ದಿಟ್ರೆಂಡಿಂಗ್ ಸುದ್ದಿಗಳುತಾಲೂಕುರಾಜ್ಯ ಸುದ್ದಿಸೋಶಿಯಲ್ ಮೀಡಿಯಾ ಅಪ್ಡೇಟ್ಸ್
ಶಿರಸಿಯಲ್ಲಿ ಶಾಲಾ ಮಕ್ಕಳಿಗಾಗಿ ಪೊಲೀಸ್ ಠಾಣೆಯಲ್ಲಿ ‘ಓಪನ್ ಹೌಸ್’ ಕಾರ್ಯಕ್ರಮ

ಶಿರಸಿ: ಶಿರಸಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಶಿವಾಜಿ ಚೌಕ್ನ ಉರ್ದು ಹಾಗೂ ಇಂಗ್ಲಿಷ್ ಶಾಲೆಯ ವಿದ್ಯಾರ್ಥಿಗಳಿಗಾಗಿ ಪೊಲೀಸ್ ಠಾಣೆಯಲ್ಲಿ ‘ತೆರೆದ ಮನೆ (Open House)’ ವಿಶೇಷ ಅರಿವು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಿಗೆ ಪೊಲೀಸ್ ಇಲಾಖೆಯ ದಿನನಿತ್ಯದ ಕಾರ್ಯವೈಖರಿ, ಕರ್ತವ್ಯಗಳು, ಸಂಚಾರ ನಿಯಮಗಳ ಪಾಲನೆ, ಸೈಬರ್ ಅಪರಾಧಗಳ ತಡೆ ಹಾಗೂ ಮಕ್ಕಳ ಸುರಕ್ಷತೆಯ ಕುರಿತು ವಿಸ್ತೃತವಾಗಿ ಮಾಹಿತಿ ನೀಡಲಾಯಿತು.
ಇದೇ ವೇಳೆ ತುರ್ತು ಸಂದರ್ಭಗಳಲ್ಲಿ ನೆರವು ಪಡೆಯಲು ಸಾರ್ವಜನಿಕರು ಬಳಸಬಹುದಾದ ERSS-112 ಉಚಿತ ಸಹಾಯವಾಣಿಯ ಬಳಕೆಯ ಬಗ್ಗೆ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಲಾಯಿತು.
ಪೊಲೀಸ್ ಇಲಾಖೆಯನ್ನು ಹತ್ತಿರದಿಂದ ಕಂಡು ತಿಳಿದುಕೊಂಡ ವಿದ್ಯಾರ್ಥಿಗಳಲ್ಲಿ ಈ ಕಾರ್ಯಕ್ರಮ ತೀವ್ರ ಕುತೂಹಲ ಮೂಡಿಸಿದ್ದು, ಮಕ್ಕಳಲ್ಲಿ ಕಾನೂನು ಗೌರವ, ಸುರಕ್ಷತೆಯ ಅರಿವು ಹಾಗೂ ಪೊಲೀಸರೊಂದಿಗೆ ಸ್ನೇಹಪೂರ್ವಕ ಬಾಂಧವ್ಯ ಬೆಳೆಸಲು ಇದು ಸಹಕಾರಿಯಾಗಿದೆ.




