ರಾಜ್ಯ ಸುದ್ದಿಜಿಲ್ಲಾ ಸುದ್ದಿತಾಲೂಕುಸ್ಥಳೀಯ ಸುದ್ದಿಗಳು

ಬೈಕ್ ಗೆ ಕಾರು ಡಿಕ್ಕಿ ಮೂವರಿಗೆ ಗಂಭೀರ ಗಾಯಗಳು:ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕಡಪ ಹೈವೇ ರಸ್ತೆಯಲ್ಲಿ ಘಟನೆ

Share News

ಚಿಕ್ಕಬಳ್ಳಾಪುರ:ಚಿಂತಾಮಣಿ ಮದನಪಲ್ಲಿ ರಸ್ತೆಯ ಚೀಮನಹಳ್ಳಿ ಬಳಿ ವೇಗವಾಗಿ ಬಂದ ಕಾರು ಬೈಕ್ ಹಿಂಬದಿಗೆ ಡಿಕ್ಕಿಯಾಗಿ ಮೂವರು ಗಾಯಗೊಂಡಿದ್ದಾರೆ.

ನಗರದ ಸೊಣ್ಣಶೆಟ್ಟಹಳ್ಳಿಯ ನಿವಾಸಿ ಚೆನ್ನಕೇಶವರೆಡ್ಡಿ ಗಂಭೀರವಾಗಿ ಗಾಯಗೊಂಡಿದ್ದಾರೆ.ಬೈಕ್ ಸವಾರ ನಾಗರಾಜ್ ಮತ್ತು ಕಾರು ಚಾಲಕ ಬಾಬು ಗೆ ಸಣ್ಣಪುಟ್ಟ ಗಾಯಗಳಾಗಿವೆ.

ನಾಗರಾಜ್ ಮತ್ತು ಚೆನ್ನಕೇಶವರೆಡ್ಡಿ ಬೈಕ್ ನಲ್ಲಿ ಚೀಮನಹಳ್ಳಿಗೆ ಹೋಗಿ ನಗರಕ್ಕೆ ವಾಪಸ್ ಬರುತ್ತಿದ್ದರು. ಬೆಂಗಳೂರಿನ ಕೆ ಆರ್ ಪುರಂ ನಿವಾಸಿ ಬಾಬು ಕಾರಿನಲ್ಲಿ ಮದನಪಲ್ಲಿಗೆ ಹೋಗಿ ಬೆಂಗಳೂರಿಗೆ ವಾಪಸ್ ಹೋಗುತ್ತಿದ್ದರು.ಚೀಮನಹಳ್ಳಿಯ ಬಳಿ ವೇಗವಾಗಿ ಬಂದ ಕಾರು ನಿಯಂತ್ರಣಕ್ಕೆ ಚಾಲಕನಿಗೆ ಸಿಗದೆ ಬೈಕ್ ಗೆ ಹಿಂಬದಿಯಿಂದ ಡಿಕ್ಕಿ ಹೊಡೆದು ರಸ್ತೆ ಬದಿಗೆ ಮುಗುಚಿಬಿದ್ದಿದೆ.

ಬೈಕ್ ಸಹ ಮುಗ್ಗರಿಸಿ ಬಿದ್ದಿದ್ದು ಇಬ್ಬರೂ ಕೆಳಗೆ ಬಿದ್ದು ಗಾಯಗೊಂಡಿದ್ದಾರೆ. ಹಿಂಬದಿ ಕುಳಿತಿದ್ದ ಚೆನ್ನಕೇಶವರೆಡ್ಡಿ ತೀವ್ರವಾಗಿ ಗಾಯಗೊಂಡಿದ್ದಾರೆ. ಅದೃಷ್ಟವಶಾತ್ ಕಾರಿನ ಚಾಲಕ ಬಾಬುಗೆ ಹೆಚ್ಚಿನ ಗಾಯಗಳಾಗಿಲ್ಲ.

1 1 2 ಪೋಲೀಸರು ಸ್ಥಳಕ್ಕೆ ಆಗಮಿಸಿ ಅಂಬ್ಯುಲೆನ್ಸ್ ಗೆ ಕರೆ ಮಾಡಿದ್ದಾರೆ. ಅದು ಬರುವುದು ತಡವಾಗಿದ್ದರಿಂದ ಯಾವುದೋ ಖಾಸಗಿ ವಾಹನದಲ್ಲಿ ಗಾಯಾಳುಗಳನ್ನು ನಗರದ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.

ಗಂಭಿರವಾಗಿ ಗಾಯಗೊಂಡಿದ್ದ ಚೆನ್ನಕೇಶವರೆಡ್ಡಿಗೆ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರಕ್ಕೆ ರವಾನಿಸಲಾಗಿದೆ.ಸವಾರ ನಾಗರಾಜ್ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ವರದಿ:ಕೆ.ಮುತ್ತಕದಹಳ್ಳಿ ವೆಂಕಟಾಚಲಪತಿ ಪೊಲೀಸ್ ವಾರ್ತೆ ಜಿಲ್ಲಾ ವರದಿಗಾರರು


Share News

Related Articles

Leave a Reply

Your email address will not be published. Required fields are marked *

Back to top button
error: Content is protected !!