ಜಿಲ್ಲಾ ಸುದ್ದಿಕ್ರೈಂ ಸುದ್ದಿಟ್ರೆಂಡಿಂಗ್ ಸುದ್ದಿಗಳುತಾಲೂಕುರಾಜ್ಯ ಸುದ್ದಿಸೋಶಿಯಲ್ ಮೀಡಿಯಾ ಅಪ್ಡೇಟ್ಸ್

ವಿದ್ಯಾರಣ್ಯಪುರದಿಂದ ನಾಪತ್ತೆಯಾಗಿದ್ದ ವಿದ್ಯಾರ್ಥಿನಿಯರು ೮ ತಿಂಗಳ ಬಳಿಕ ಪತ್ತೆ: ಗರ್ಭಿಣಿಯಾದ ತನಿಷ್ಕಾ, ಸಿಐಡಿ ಕಾರ್ಯಾಚರಣೆ ಯಶಸ್ವಿ

Share News

ಬೆಂಗಳೂರು: ರಾಜಧಾನಿಯ ವಿದ್ಯಾರಣ್ಯಪುರದಿಂದ ಕಳೆದ ಜನವರಿ ೩೧ ರಂದು ದಿಢೀರ್ ನಾಪತ್ತೆಯಾಗಿದ್ದ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ತನಿಷ್ಕಾ ಹಾಗೂ ಪ್ರಥಮ ಪಿಯುಸಿ ವಿದ್ಯಾರ್ಥಿನಿ ತೇಜಸ್ವಿನಿ ಅಂತಿಮವಾಗಿ ೮ ತಿಂಗಳ ಸುದೀರ್ಘ ಹುಡುಕಾಟದ ಬಳಿಕ ಸಿಐಡಿ (CID) ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.

​ಪ್ರಕರಣದ ಗಂಭೀರತೆ ಪರಿಗಣಿಸಿ ಹೈಕೋರ್ಟ್ ನಿರ್ದೇಶನದಂತೆ ತನಿಖೆಯನ್ನು ಸಿಐಡಿಗೆ ವರ್ಗಾಯಿಸಲಾಗಿತ್ತು. ಕಳೆದ ಮೂರು ತಿಂಗಳಿಂದ ತೀವ್ರ ತನಿಖೆ ನಡೆಸಿದ ಸಿಐಡಿ ತಂಡ ಇದೀಗ ಇಬ್ಬರನ್ನೂ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ.

​ಪ್ರಕರಣದ ಹಿನ್ನೆಲೆ ಮತ್ತು ತನಿಖೆಯ ಹಾದಿ:

​ಮನೆಯಲ್ಲಿದ್ದ ಒತ್ತಡಕ್ಕೆ ಸುಳ್ಳು: ಕಾಲೇಜಿಗೆ ತೆರಳಿದ್ದ ಇಬ್ಬರು ಯುವತಿಯರು ಮನೆಯಲ್ಲಿನ ಒತ್ತಡ ತಾಳಲಾರದೆ ನಾಪತ್ತೆಯಾಗಿದ್ದರು. ವಿದ್ಯಾರಣ್ಯಪುರ ಪೊಲೀಸರ ತನಿಖೆ ವೇಳೆ ಇವರು ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಿದ್ದು ಪತ್ತೆಯಾಗಿತ್ತು.

​ಯುವಕನ ಪರಿಚಯ ಹಾಗೂ ಮದುವೆ: ಮಲೆ ಮಹದೇಶ್ವರ ಬೆಟ್ಟದಲ್ಲಿ ಕನಕಪುರ ತಾಲೂಕಿನ ಯುವಕನೊಬ್ಬನ ಪರಿಚಯವಾಗಿತ್ತು. ಈ ವೇಳೆ ತನಗೆ ಮತ್ತು ತಂಗಿಗೆ ಪೋಷಕರಿಲ್ಲವೆಂದು ಸುಳ್ಳು ಹೇಳಿ ಆತನೊಂದಿಗೆ ತೆರಳಿದ್ದರು. ಬಳಿಕ ಯುವಕ ತನಿಷ್ಕಾಳನ್ನು ಮದುವೆಯಾಗಿದ್ದು, ತಂಗಿ ತೇಜಸ್ವಿನಿಯನ್ನು ತಮ್ಮೊಂದಿಗೇ ಇರಿಸಿಕೊಂಡಿದ್ದರು.

​ಸಿಐಡಿಗೆ ಸಿಕ್ಕಿಬಿದ್ದಿದ್ದು ಹೇಗೆ?:

ಇತ್ತೀಚೆಗೆ ತನಿಷ್ಕಾ ಆಧಾರ್ ಕಾರ್ಡ್ ನೀಡಿ ಹೊಸ ಸಿಮ್ ಕಾರ್ಡ್ ಖರೀದಿ ಮಾಡಲು ಯತ್ನಿಸಿದ್ದಳು. ಆಧಾರ್ ಸಂಖ್ಯೆ ಸಕ್ರಿಯಗೊಂಡ ತಕ್ಷಣ ಟೆಲಿಕಾಂ ಸರ್ವಿಸ್ ಪ್ರೊವೈಡರ್‌ನಿಂದ ಸಿಐಡಿಗೆ ಮಾಹಿತಿ ರವಾನೆಯಾಗಿತ್ತು. ಈ ಸುಳಿವು ಆಧರಿಸಿ ದಾಳಿ ನಡೆಸಿದ ಸಿಐಡಿ ಅಧಿಕಾರಿಗಳು ಇಬ್ಬರನ್ನೂ ವಶಕ್ಕೆ ಪಡೆದಿದ್ದಾರೆ.

​ತನಿಷ್ಕಾ ಪ್ರಸ್ತುತ ಗರ್ಭಿಣಿಯಾಗಿದ್ದು, ಸಿಐಡಿ ಪೊಲೀಸರು ಇಬ್ಬರೂ ಯುವತಿಯರನ್ನು ಇಂದು ಹೈಕೋರ್ಟ್ ಮುಂಭಾಗ ಹಾಜರುಪಡಿಸಲಿದ್ದಾರೆ.


Share News

Related Articles

Leave a Reply

Your email address will not be published. Required fields are marked *

Back to top button
error: Content is protected !!