ಜಿಲ್ಲಾ ಸುದ್ದಿಕ್ರೈಂ ಸುದ್ದಿಟ್ರೆಂಡಿಂಗ್ ಸುದ್ದಿಗಳುತಾಲೂಕುರಾಜ್ಯ ಸುದ್ದಿಸೋಶಿಯಲ್ ಮೀಡಿಯಾ ಅಪ್ಡೇಟ್ಸ್

ಬಡ್ಡಿ ಹಣ ನೀಡದ್ದಕ್ಕೆ ಮಹಿಳೆಗೆ ಕಿಡ್ನಾಪ್, ನಗ್ನಗೊಳಿಸಿ ಹಲ್ಲೆ: ಚಂದ್ರಾ ಲೇಔಟ್ ಪೊಲೀಸರಿಂದ ಮೂವರ ಬಂಧನ!

Share News

ಬೆಂಗಳೂರು: ಬಡ್ಡಿ ಹಾಗೂ ಸಾಲದ ಹಣ ವಾಪಸ್ ನೀಡಲಿಲ್ಲ ಎಂಬ ಕಾರಣಕ್ಕೆ ಮಹಿಳೆಯೊಬ್ಬರನ್ನು ಕಿಡ್ನಾಪ್ ಮಾಡಿ, ನಗ್ನಗೊಳಿಸಿ ಹಲ್ಲೆ ನಡೆಸಿ ವೀಡಿಯೋ ಚಿತ್ರೀಕರಿಸಿ ಬೆದರಿಕೆಯೊಡ್ಡಿದ್ದ ಬೆಚ್ಚಿಬೀಳಿಸುವ ಘಟನೆ ರಾಜಧಾನಿಯಲ್ಲಿ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಇಬ್ಬರು ಮಹಿಳೆಯರು ಸೇರಿದಂತೆ ಮೂವರು ಆರೋಪಿಗಳನ್ನು ಚಂದ್ರಾ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

​ರೇಷ್ಮಾ ಬಾನು, ನಝತ್ ಹಾಗೂ ಸುಹೇಲ್ ಬಂಧಿತ ಆರೋಪಿಗಳು.

​ಘಟನೆಯ ವಿವರ:

ಸಂತ್ರಸ್ತ ಮಹಿಳೆಯು ರೇಷ್ಮಾ ಬಾನು ಬಳಿ ₹1 ಲಕ್ಷ ಹಾಗೂ ನಝತ್ ಬಳಿ ₹50 ಸಾವಿರ ಸಾಲ ಪಡೆದಿದ್ದರು. ಆರಂಭದಲ್ಲಿ ಸರಿಯಾಗಿ ಕಂತು ಹಾಗೂ ಬಡ್ಡಿ ಪಾವತಿಸುತ್ತಿದ್ದ ಸಂತ್ರಸ್ತೆ, ಹಣಕಾಸಿನ ಸಮಸ್ಯೆಯಿಂದಾಗಿ ಕಳೆದ ಕೆಲವು ತಿಂಗಳುಗಳಿಂದ ಹಣ ಪಾವತಿಸಿರಲಿಲ್ಲ. ರೇಷ್ಮಾ ಕಿರುಕುಳ ತಾಳಲಾರದೆ ಸಂತ್ರಸ್ತೆ ಆಕೆಯ ನಂಬರ್ ಬ್ಲಾಕ್ ಮಾಡಿ, ಮನೆ ಖಾಲಿ ಮಾಡಿ ತಾಯಿ ಮನೆಗೆ ತೆರಳಿದ್ದರು.

​ಇತ್ತೀಚೆಗೆ, ಕೆಲಸವೊಂದಿದೆ ಎಂದು ನಂಬಿಸಿ ನಝತ್ ಎಂಬಾಕೆ ಸಂತ್ರಸ್ತೆಯನ್ನು ತನ್ನ ಮನೆಗೆ ಕರೆಸಿಕೊಂಡಿದ್ದಾಳೆ. ಅಲ್ಲಿಗೆ ಬಂದ ರೇಷ್ಮಾ ಬಾನು ಹಾಗೂ ಆಕೆಯ ಪತಿ ಸುಹೇಲ್, ಸಂತ್ರಸ್ತೆಯ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ. ನಂತರ ಆಟೋದಲ್ಲಿ ಕರೆದೊಯ್ದು ಕುಂಬಳಗೋಡು ಸಮೀಪದ ಮನೆಯೊಂದರಲ್ಲಿ ಕೂಡಿಹಾಕಿ, ನಗ್ನಗೊಳಿಸಿ ವೀಡಿಯೋ ಮಾಡಿಕೊಂಡು, ಹಣ ನೀಡದಿದ್ದರೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.

​ಮಿಸ್ಸಿಂಗ್ ಕಂಪ್ಲೆಂಟ್‌ನಿಂದ ಬಯಲಾದ ಸತ್ಯ:

ಮಗಳು ಕಾಣೆಯಾಗಿರುವ ಕುರಿತು ಸಂತ್ರಸ್ತೆಯ ತಾಯಿ ಚಂದ್ರಾ ಲೇಔಟ್ ಪೊಲೀಸ್ ಠಾಣೆಗೆ ನೀಡಿ ದೂರಿನ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಪೊಲೀಸರು, ಸಂತ್ರಸ್ತೆಯನ್ನು ಪತ್ತೆಹಚ್ಚಿ ರಕ್ಷಿಸಿದ್ದಾರೆ. ಬಳಿಕ ಸಂತ್ರಸ್ತೆಯಿಂದ ದೂರು ಪಡೆದು ಮೂವರನ್ನೂ ಬಂಧಿಸಿದ್ದು, ಚಂದ್ರಾ ಲೇಔಟ್ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.


Share News

Related Articles

Leave a Reply

Your email address will not be published. Required fields are marked *

Back to top button
error: Content is protected !!