ಜಿಲ್ಲಾ ಸುದ್ದಿಕ್ರೈಂ ಸುದ್ದಿಟ್ರೆಂಡಿಂಗ್ ಸುದ್ದಿಗಳುತಾಲೂಕುರಾಜ್ಯ ಸುದ್ದಿಸೋಶಿಯಲ್ ಮೀಡಿಯಾ ಅಪ್ಡೇಟ್ಸ್

ಸೊಸೈಟಿ ಕಳ್ಳತನ ಪ್ರಕರಣ: ಆರೋಪಿಗೆ 2 ವರ್ಷ ಜೈಲು, ₹7 ಸಾವಿರ ದಂಡ

Share News

ಕುಮಟಾ: ಶ್ರೀ ಯಶೋಧರ ನಾಯ್ಕ ಕೋ-ಆಪರೇಟಿವ್ ಸೊಸೈಟಿಯ ಬೀಗ ಮುರಿದು ₹1.58 ಲಕ್ಷಕ್ಕೂ ಅಧಿಕ ಹಣ ಕಳವು ಮಾಡಿದ್ದ ಆರೋಪಿಗೆ ಕುಮಟಾದ ಪ್ರಧಾನ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯವು ಶಿಕ್ಷೆ ವಿಧಿಸಿ ಆದೇಶಿಸಿದೆ.

​ದಾಂಡೇಲಿಯ ಸುಭಾಸನಗರದ ಮುಜಫರ್ ಮಹಮ್ಮದ್ ಸಾಬ್ ಶಿಕ್ಷೆಗೆ ಒಳಗಾದ ಆರೋಪಿ. ಈತ 2020ರ ಡಿಸೆಂಬರ್ 17ರಂದು ಸೊಸೈಟಿಯ ಬೀಗ ಮುರಿದು ₹1,58,994 ನಗದು ಕದ್ದಿದ್ದ. ಅಲ್ಲದೆ, ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಸಿಸಿ ಕ್ಯಾಮೆರಾ ಡಿವಿಆರ್ ತೆಗೆದುಕೊಂಡು ಹೋಗಿ ಅಘನಾಶಿನಿ ಹೊಳೆಗೆ ಎಸೆದಿದ್ದ.

​ತೀರ್ಪಿನ ವಿವರಗಳು:

​ಶಿಕ್ಷೆ ಹಾಗೂ ದಂಡ: ನ್ಯಾಯಾಧೀಶರಾದ ಶ್ರೀಮತಿ ವರ್ಷಶ್ರೀ ಅವರು ಆರೋಪಿಯನ್ನು ದೋಷಿ ಎಂದು ತೀರ್ಮಾನಿಸಿದ್ದು, IPC 457, 380 ಹಾಗೂ 201ರ ಅಡಿಯಲ್ಲಿ ಒಟ್ಟು 2 ವರ್ಷದ ಸಾದಾ ಜೈಲು ಶಿಕ್ಷೆ ಮತ್ತು ₹7,000 ದಂಡ ವಿಧಿಸಿದ್ದಾರೆ. (ದಂಡ ತೆರಲು ತಪ್ಪಿದರೆ ಹೆಚ್ಚುವರಿ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ).

​ತನಿಖಾ ತಂಡ: ಕುಮಟಾ ಪಿಎಸ್‌ಐ ರವಿ ಗುಡ್ಡಿ, ಸಿಪಿಐ ಪರಮೇಶ್ವರ ಗುನಗಾ ಹಾಗೂ ಶಿವಪ್ರಕಾಶ್ ಆರ್. ನಾಯ್ಕ್ ಅವರು ಪ್ರಕರಣದ ತನಿಖೆ ನಡೆಸಿ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.

​ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ಗಿರೀಶ ನಾಗಪ್ಪ ಪಟಗಾರ ಅವರು ವಾದ ಮಂಡಿಸಿದ್ದರು.


Share News

Related Articles

Leave a Reply

Your email address will not be published. Required fields are marked *

Back to top button
error: Content is protected !!