ಜಿಲ್ಲಾ ಸುದ್ದಿಟ್ರೆಂಡಿಂಗ್ ಸುದ್ದಿಗಳುತಾಲೂಕುರಾಜ್ಯ ಸುದ್ದಿಸೋಶಿಯಲ್ ಮೀಡಿಯಾ ಅಪ್ಡೇಟ್ಸ್ಸ್ಥಳೀಯ ಸುದ್ದಿಗಳು
ವಿಧಾನಸೌಧದಲ್ಲಿ ಫ್ರೀಡಂ ಹಬ್ಬದ ಸಿದ್ಧತೆ: ಮುಂಜಾಗ್ರತಾ ಕ್ರಮವಾಗಿ ಜಿಬಿಎ ಸಿಬ್ಬಂದಿಯಿಂದ ಫಾಗಿಂಗ್!

ಆಗಸ್ಟ್ 15ರ ಸ್ವತಂತ್ರ್ಯ ದಿನಾಚರಣೆ ಹಾಗೂ ಫ್ರೀಡಂ ಹಬ್ಬದ ಹಿನ್ನೆಲೆಯಲ್ಲಿ ರಾಜಧಾನಿ ಬೆಂಗಳೂರಿನ ವಿಧಾನಸೌಧದ ಆವರಣದಲ್ಲಿ ಜಿಬಿಎ (ಗ್ರೇಟರ್ ಬೆಂಗಳೂರು ಪ್ರಾಧಿಕಾರ) ಸಿಬ್ಬಂದಿ ವ್ಯಾಪಕ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ.
ಸೊಳ್ಳೆಗಳ ನಿಯಂತ್ರಣಕ್ಕೆ ಕ್ರಿಮಿನಾಶಕ ಸಿಂಪಡಣೆ:
ಕಾರ್ಯಕ್ರಮಕ್ಕೆ ಆಗಮಿಸುವ ಸಾವಿರಾರು ಸಾರ್ವಜನಿಕರು, ವಿದೇಶಿ ಪ್ರತಿನಿಧಿಗಳು ಹಾಗೂ ಜನಪ್ರತಿನಿಧಿಗಳು ಸೇರಿದಂತೆ ಗಣ್ಯ ವ್ಯಕ್ತಿಗಳಿಗೆ ಸೊಳ್ಳೆಗಳ ಕಾಟದಿಂದ ಯಾವುದೇ ರೀತಿಯ ತೊಂದರೆಯಾಗದಂತೆ ತಡೆಯಲು ವಿಧಾನಸೌಧದ ಸುತ್ತಮುತ್ತ ಮಸ್ಕಿಟೋ ಫಾಗಿಂಗ್ (Mosquito Fogging) ಕಾರ್ಯಾಚರಣೆ ನಡೆಸಲಾಯಿತು.
ಮುನ್ನೆಚ್ಚರಿಕೆಗೆ ಮೊದಲ ಆದ್ಯತೆ:
ವಿಧಾನಸೌಧದ ಆವರಣ, ಉದ್ಯಾನವನ ಹಾಗೂ ಪ್ರಮುಖ ಪ್ರವೇಶ ದ್ವಾರಗಳ ಬಳಿ ಕ್ರಿಮಿನಾಶಕ ಹೊಗೆ ಸಿಂಪಡಿಸಿದ ಜಿಬಿಎ ಆರೋಗ್ಯ ವಿಭಾಗದ ಸಿಬ್ಬಂದಿ, ಹಬ್ಬದ ಆಚರಣೆ ವೇಳೆ ಸಾರ್ವಜನಿಕರಿಗೆ ಯಾವುದೇ ನೈರ್ಮಲ್ಯ ಅಥವಾ ಆರೋಗ್ಯ ಸಮಸ್ಯೆ ಎದುರಾಗದಂತೆ ಮುನ್ನೆಚ್ಚರಿಕೆ ವಹಿಸಿದ್ದಾರೆ.



