ಉಪಯುಕ್ತ ಮಾಹಿತಿಗಳುಜಿಲ್ಲಾ ಸುದ್ದಿಟ್ರೆಂಡಿಂಗ್ ಸುದ್ದಿಗಳುತಾಲೂಕುರಾಜ್ಯ ಸುದ್ದಿಸೋಶಿಯಲ್ ಮೀಡಿಯಾ ಅಪ್ಡೇಟ್ಸ್

ಶಿರಸಿಯಲ್ಲಿ ಶಾಲಾ ಮಕ್ಕಳಿಗಾಗಿ ಪೊಲೀಸ್ ಠಾಣೆಯಲ್ಲಿ ‘ಓಪನ್ ಹೌಸ್’ ಕಾರ್ಯಕ್ರಮ

Share News

ಶಿರಸಿ: ಶಿರಸಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಶಿವಾಜಿ ಚೌಕ್‌ನ ಉರ್ದು ಹಾಗೂ ಇಂಗ್ಲಿಷ್ ಶಾಲೆಯ ವಿದ್ಯಾರ್ಥಿಗಳಿಗಾಗಿ ಪೊಲೀಸ್ ಠಾಣೆಯಲ್ಲಿ ‘ತೆರೆದ ಮನೆ (Open House)’ ವಿಶೇಷ ಅರಿವು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

​ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಿಗೆ ಪೊಲೀಸ್ ಇಲಾಖೆಯ ದಿನನಿತ್ಯದ ಕಾರ್ಯವೈಖರಿ, ಕರ್ತವ್ಯಗಳು, ಸಂಚಾರ ನಿಯಮಗಳ ಪಾಲನೆ, ಸೈಬರ್ ಅಪರಾಧಗಳ ತಡೆ ಹಾಗೂ ಮಕ್ಕಳ ಸುರಕ್ಷತೆಯ ಕುರಿತು ವಿಸ್ತೃತವಾಗಿ ಮಾಹಿತಿ ನೀಡಲಾಯಿತು.

​ಇದೇ ವೇಳೆ ತುರ್ತು ಸಂದರ್ಭಗಳಲ್ಲಿ ನೆರವು ಪಡೆಯಲು ಸಾರ್ವಜನಿಕರು ಬಳಸಬಹುದಾದ ERSS-112 ಉಚಿತ ಸಹಾಯವಾಣಿಯ ಬಳಕೆಯ ಬಗ್ಗೆ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಲಾಯಿತು.

​ಪೊಲೀಸ್ ಇಲಾಖೆಯನ್ನು ಹತ್ತಿರದಿಂದ ಕಂಡು ತಿಳಿದುಕೊಂಡ ವಿದ್ಯಾರ್ಥಿಗಳಲ್ಲಿ ಈ ಕಾರ್ಯಕ್ರಮ ತೀವ್ರ ಕುತೂಹಲ ಮೂಡಿಸಿದ್ದು, ಮಕ್ಕಳಲ್ಲಿ ಕಾನೂನು ಗೌರವ, ಸುರಕ್ಷತೆಯ ಅರಿವು ಹಾಗೂ ಪೊಲೀಸರೊಂದಿಗೆ ಸ್ನೇಹಪೂರ್ವಕ ಬಾಂಧವ್ಯ ಬೆಳೆಸಲು ಇದು ಸಹಕಾರಿಯಾಗಿದೆ.


Share News

Related Articles

Leave a Reply

Your email address will not be published. Required fields are marked *

Back to top button
error: Content is protected !!