ಜಿಲ್ಲಾ ಸುದ್ದಿಕ್ರೈಂ ಸುದ್ದಿಟ್ರೆಂಡಿಂಗ್ ಸುದ್ದಿಗಳುತಾಲೂಕುರಾಜ್ಯ ಸುದ್ದಿಸೋಶಿಯಲ್ ಮೀಡಿಯಾ ಅಪ್ಡೇಟ್ಸ್

ರಾಣೇಬೆನ್ನೂರಿನಲ್ಲಿ ಅನಧಿಕೃತ ರ‍್ಯಾಪಿಡೊ ಬೈಕ್ ಟ್ಯಾಕ್ಸಿಗಳ ಮೇಲೆ ಆರ್‌ಟಿಒ ದಾಳಿ: ಎರಡು ವಾಹನಗಳು ಸೀಜ್

Share News

ರಾಣೇಬೆನ್ನೂರು: ನಗರದಲ್ಲಿ ನಿಯಮಬಾಹಿರವಾಗಿ ಸಾರ್ವಜನಿಕ ಸಾರಿಗೆ ಸೇವೆ ನೀಡುತ್ತಿದ್ದ ರ‍್ಯಾಪಿಡೊ ಬೈಕ್ ಟ್ಯಾಕ್ಸಿಗಳ ವಿರುದ್ಧ ಆರ್‌ಟಿಒ ಅಧಿಕಾರಿಗಳು ಕಟ್ಟುನಿಟ್ಟಿನ ಕಾರ್ಯಾಚರಣೆ ನಡೆಸಿದ್ದು, ರೈಲ್ವೆ ನಿಲ್ದಾಣದ ಬಳಿ ಎರಡು ಬೈಕ್‌ಗಳನ್ನು ಜಪ್ತಿ ಮಾಡಿ ಚಾಲಕರಿಗೆ ನೋಟಿಸ್ ಜಾರಿ ಮಾಡಿದ್ದಾರೆ.

​ಖಾಸಗಿ (ವೈಟ್‌ಬೋರ್ಡ್) ದ್ವಿಚಕ್ರ ವಾಹನಗಳನ್ನು ಆನ್‌ಲೈನ್ ಆ್ಯಪ್ ಮೂಲಕ ಬಾಡಿಗೆ ಸೇವೆಗೆ ಬಳಸುವುದರಿಂದ ತಮ್ಮ ಜೀವನೋಪಾಯಕ್ಕೆ ಧಕ್ಕೆಯಾಗುತ್ತಿದೆ ಮತ್ತು ಪ್ರಯಾಣಿಕರ ಸುರಕ್ಷತೆಗೆ ತೊಡಕಾಗಿದೆ ಎಂದು ಆಟೊ ಚಾಲಕರ ಒಕ್ಕೂಟವು ಆರ್‌ಟಿಒ ಹಾಗೂ ಪೊಲೀಸ್ ಇಲಾಖೆಗೆ ದೂರು ನೀಡಿತ್ತು.

​ಆಟೊ ಚಾಲಕರ ಒಕ್ಕೂಟದಿಂದ ಅಭಿನಂದನೆ:

ಸಾಮಾನ್ಯ ಆಟೊ ಚಾಲಕರು ಸಾಲ, ವಿಮೆ ಹಾಗೂ ತೆರಿಗೆ ಪಾವತಿಸಿ ಜೀವನ ನಡೆಸುತ್ತಿದ್ದು, ಬೈಕ್ ಟ್ಯಾಕ್ಸಿಗಳಿಂದ ಅವರ ಆದಾಯ ಕುಸಿದಿತ್ತು. ಈ ಹಿನ್ನೆಲೆಯಲ್ಲಿ ತಕ್ಷಣ ಸ್ಪಂದಿಸಿ ಕ್ರಮಕೈಗೊಂಡ ಆರ್‌ಟಿಒ ಅಧಿಕಾರಿಗಳಾದ ಜಗದೀಶ ಆರ್. ಹಾಗೂ ಸಿಬ್ಬಂದಿಗೆ ರಾಣೇಬೆನ್ನೂರು ಆಟೊ ಚಾಲಕರ ಒಕ್ಕೂಟ ಅಭಿನಂದನೆ ಸಲ್ಲಿಸಿದೆ. ಅಲ್ಲದೆ, ನಗರದಲ್ಲಿ ಅನಧಿಕೃತ ಸಾರಿಗೆ ಚಟುವಟಿಕೆಗಳ ವಿರುದ್ಧ ನಿರಂತರ ಕ್ರಮ ಮುಂದುವರಿಯಬೇಕು ಎಂದು ಆಗ್ರಹಿಸಿದೆ.


Share News

Related Articles

Leave a Reply

Your email address will not be published. Required fields are marked *

Back to top button
error: Content is protected !!