ಉಪಯುಕ್ತ ಮಾಹಿತಿಗಳುಕ್ರೈಂ ಸುದ್ದಿಜಿಲ್ಲಾ ಸುದ್ದಿಟ್ರೆಂಡಿಂಗ್ ಸುದ್ದಿಗಳುತಾಲೂಕುರಾಜ್ಯ ಸುದ್ದಿ

ಕಾಪು: ಅಪರಿಚಿತ ಗಂಡಸಿನ ಮೃತದೇಹ ಪತ್ತೆ; ವಾರಸುದಾರರ ಪತ್ತೆಗೆ ಪೊಲೀಸರ ಮನವಿ

Share News

ಕಾಪು: ಇಲ್ಲಿನ ಏಣಗುಡ್ಡೆ ಗ್ರಾಮದ ಧೂಮಾವತಿ ರಸ್ತೆಯ ಪಾಪನಾಶಿನಿ ಹೊಳೆಯ ದಡದ ಬಳಿ ಸುಮಾರು 55 ರಿಂದ 60 ವರ್ಷ ಪ್ರಾಯದ ಅಪರಿಚಿತ ಗಂಡಸಿನ ಮೃತದೇಹವೊಂದು ಬುಧವಾರ (ಜುಲೈ 15) ಪತ್ತೆಯಾಗಿದೆ.

ಜುಲೈ 15 ರಂದು ಬೆಳಿಗ್ಗೆ 7:00 ಗಂಟೆಯ ಸುಮಾರಿಗೆ ಪಾಪನಾಶಿನಿ ಹೊಳೆಯ ದಡದಿಂದ ಸುಮಾರು 100 ಮೀಟರ್ ದೂರದ ನೀರಿನಲ್ಲಿ ಮೃತದೇಹವೊಂದು ತೇಲಾಡುತ್ತಿರುವುದನ್ನು ಸ್ಥಳೀಯ ಮೀನುಗಾರರು ಗಮನಿಸಿ ಮಾಹಿತಿ ನೀಡಿದ್ದರು. ತಕ್ಷಣ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಬೆಳಿಗ್ಗೆ 9:00 ಗಂಟೆಯ ಸುಮಾರಿಗೆ ಸಾರ್ವಜನಿಕರ ಸಹಾಯದಿಂದ ಮೃತದೇಹವನ್ನು ಹೊಳೆಯ ದಡಕ್ಕೆ ತರಲಾಗಿದೆ.

​ಮೃತ ವ್ಯಕ್ತಿಯು ಆಕಸ್ಮಿಕವಾಗಿ ನೀರಿಗೆ ಬಿದ್ದು ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದ್ದು, ಸದ್ಯ ಮೃತದೇಹವನ್ನು ಗುರುತು ಪತ್ತೆಗಾಗಿ ಉಡುಪಿಯ ಅಜ್ಜರಕಾಡು ಜಿಲ್ಲಾ ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಯುಡಿಆರ್ ನಂಬ್ರ: 23/2026, ಕಲಂ: 194 BNSS ನಂತೆ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಮೃತರ ಚಹರೆ ವಿವರ:

​ಪ್ರಾಯ: ಸುಮಾರು 55 ರಿಂದ 60 ವರ್ಷ

​ದೇಹದಾರ್ಢ್ಯ: ಸಾಧಾರಣ ಶರೀರ, ಗೋಧಿ ಮೈಬಣ್ಣ, ದುಂಡು ಮುಖ

​ಗುರುತು: ಕೆಂಪು ಮತ್ತು ಬಿಳಿ ಬಣ್ಣದ ಮೀಸೆ ಹಾಗೂ ಗಡ್ಡ ಹೊಂದಿದ್ದಾರೆ.

​ಧರಿಸಿದ್ದ ಬಟ್ಟೆ: ಬಿಳಿ ಬಣ್ಣದ ತುಂಬು ತೋಳಿನ ಶರ್ಟ್ ಮತ್ತು ಹಸಿರು-ನೀಲಿ ಬಣ್ಣದ ಚೌಕುಳಿಯ (ಚೆಕ್ಸ್) ಲುಂಗಿ ಧರಿಸಿದ್ದಾರೆ.

ಮೃತರ ವಾರಸುದಾರರು ಅಥವಾ ಈ ಚಹರೆಯುಳ್ಳ ವ್ಯಕ್ತಿಯ ಬಗ್ಗೆ ಯಾವುದೇ ಮಾಹಿತಿ ಲಭ್ಯವಿದ್ದಲ್ಲಿ ಸಾರ್ವಜನಿಕರು ತಕ್ಷಣವೇ ಈ ಕೆಳಗಿನ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಲು ಪೊಲೀಸರು ಕೋರಿದ್ದಾರೆ:

​ಕಾಪು ಪೊಲೀಸ್ ಠಾಣೆ: 0820-2551033

​ಕಾಪು ವೃತ್ತ ನಿರೀಕ್ಷಕರ ಕಚೇರಿ: 0820-2572333

​ಸಹಾಯಕ ಪೊಲೀಸ್ ಅಧೀಕ್ಷಕರ ಕಚೇರಿ (ಕಾರ್ಕಳ): 08254-231333

​ಉಡುಪಿ ಜಿಲ್ಲಾ ಪೊಲೀಸ್ ಕಚೇರಿ: 0820-2534777

​ಉಡುಪಿ ಜಿಲ್ಲಾ ನಿಸ್ತಂತು ನಿಯಂತ್ರಣ ಕೊಠಡಿ (Control Room): 0820-2526444

 


Share News

Related Articles

Leave a Reply

Your email address will not be published. Required fields are marked *

Back to top button
error: Content is protected !!