ಕೈಗಾರಿಕಾ ಇಲಾಕೆಯಿಂದ ಹೆಚ್ಚುವರಿ ಪರಿಹಾರ ಪಡೆಯುವ ಸಲುವಾಗಿ ಹೆಚ್ಚು ಮಾವಿನ ಸಸಿ ನಾಟುತ್ತಿದ್ದಾರೆಂದು ಸಾರ್ವಜನಿಕರ ಆರೋಪ

ಚಿಕ್ಕಬಳ್ಳಾಪುರ:ಜಿಲ್ಲೆಯ ಚಿಂತಾಮಣಿ ತಾಲೂಕಿನ ಕೈವಾರ ಹೋಬಳಿಯ ಜಂಗಮಶಿಗೇಹಳ್ಳಿ ಗ್ರಾಮದ ಮುನಿನಾರಾಯಣಪ್ಪ ರವರು ಚಿಂತಾಮಣಿ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ತಾಲೂಕು ಅಧ್ಯಕ್ಷರು ಹಾಗೂ ಮಾನ್ಯ ಎಂ ಸಿ ಸುಧಾಕರ್, ಉನ್ನತ ಶಿಕ್ಷಣ ಸಚಿವರು,
ಕರ್ನಾಟಕ ಸರ್ಕಾರ ಇವರ ಬಲಗೈ ಬಂಟರಾದ ಇವರು ಮಾಡಿದ ಘನ ಕಾರ್ಯ ಏನೆಂದರೆ ಇತ್ತೀಚಿಗೆ ಚಿಂತಾಮಣಿ ತಾಲೂಕು ಕೈವಾರ ಹೋಬಳಿ ವಡ್ಡಹಳ್ಳಿ ಗ್ರಾಮದ ಸುಮಾರು 450 ಎಕರೆ ಜಮೀನು ಕೈಗಾರಿಕ ವಲಯದ (KIADB) ಪ್ರಾಥಮಿಕ ಅದಿಸೂಚನೆ ಆಗಿರುತ್ತದೆ ಸದರಿ ಅದಿಸೂಚನೆಯಲ್ಲಿ ಮುನಿನಾರಾಯಣಪ್ಪ ಅವರ ಕುಟುಂಬಕ್ಕೆ ಸೇರಿದ ಸುಮಾರು 10ಎಕರೆ ಮಾವಿನತೋಪು ಇರುವ ಜಮೀನು ಸಹ ಭೂ ಸ್ವಾದಿನ ಪ್ರಕ್ರಿಯೆಗೆ ಒಳಪಟ್ಟಿರುತ್ತದೆ.
ಆದರೆ ಸದರಿ ಚಿಂತಾಮಣಿ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಮುನಿನಾರಾಯಣಪ್ಪ ರವರು ದಿನಾಂಕ 31/03/2026 ಮತ್ತು 01/04/2026 ರಂದು ಹಾಲಿ ಇರುವ ಮಾವಿನ ಮರಗಳ ಮದ್ಯದಲ್ಲಿ ಸಣ್ಣ ಮಾವಿನ ಸಸಿಗಳನ್ನು ನಾಟಿ ಮಾಡಿರುತ್ತಾರೆ.
ಆದ್ದರಿಂದ ಹೆಚ್ಚುವರಿ ಮಾವಿನ ಸಸಿಗಳಿಗೆ ಪರಿಹಾರ ಪಡೆಯುವ ಸಲುವಾಗಿ ಜೆಎಂಸಿ ಮಾಡಿಸಲು (KIADB )ಅಧಿಕಾರಿಗಳಿಗೆ ಮಾನ್ಯ ಸಚಿವರ ಮುಖಾಂತರ ಅಧಿಕಾರಿಗಳಿಗೆ ಒತ್ತಡ ಹಾಕಿಸುತ್ತಿದ್ದಾರೆ ಎಂದು ಸುತ್ತಮುತ್ತಲಿನ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವರದಿ.ಕೆ.ಮುತ್ತಕದಹಳ್ಳಿ ವೆಂಕಟಾಚಲಪತಿ ಪೊಲೀಸ್ ವಾರ್ತೆ ಚಿಕ್ಕಬಳ್ಳಾಪುರ



