Crime Newsಕ್ರೈಂ ಸುದ್ದಿಜಿಲ್ಲಾ ಸುದ್ದಿತಾಲೂಕುರಾಜ್ಯ ಸುದ್ದಿ

ಬೆಂಗಳೂರು: ಕೈದಿ ಭೇಟಿ ನೆಪದಲ್ಲಿ ಜೈಲಿಗೆ ಗಾಂಜಾ, ಸಿಮ್ ಕಾರ್ಡ್ ಸಪ್ಲೈ; ಯುವತಿ ಅರೆಸ್ಟ್!

Share News

ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ವಿಚಾರಣಾಧೀನ ಕೈದಿಯನ್ನು ಭೇಟಿ ಮಾಡುವ ನೆಪದಲ್ಲಿ ಮಾದಕ ವಸ್ತು ಹಾಗೂ ಸಿಮ್ ಕಾರ್ಡ್‌ಗಳನ್ನು ಒಳಸಾಗಿಸಲು ಯತ್ನಿಸಿದ ಯುವತಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತಳನ್ನು ರಿತಿಕಾ ರೈ (27) ಎಂದು ಗುರುತಿಸಲಾಗಿದೆ.

ಮಾರ್ಚ್ 26ರಂದು ಸಂಜೆ 4:30ರ ಸುಮಾರಿಗೆ ವಿಸಿಟರ್ಸ್ ಪಾಸ್ ಪಡೆದ ರಿತಿಕಾ ರೈ, ಜೈಲಿನಲ್ಲಿರುವ ವಿಚಾರಣಾಧೀನ ಕೈದಿ ಫರಾನ್ ಖಾನ್ ಎಂಬಾತನನ್ನು ಭೇಟಿ ಮಾಡಲು ತೆರಳಿದ್ದಳು. ಜೈಲಿನ ಮುಖ್ಯ ದ್ವಾರದ ಬಳಿ ಈಕೆ ಅನುಮಾನಾಸ್ಪದವಾಗಿ ಓಡಾಡುತ್ತಿರುವುದನ್ನು ಗಮನಿಸಿದ ಕೈಗಾರಿಕಾ ಭದ್ರತಾ ಪಡೆಯ (ISF) ಸಿಬ್ಬಂದಿ ಕೂಡಲೇ ಆಕೆಯನ್ನು ತಡೆದು ನಿಲ್ಲಿಸಿದ್ದಾರೆ.

ಮಹಿಳಾ ಭದ್ರತಾ ಸಿಬ್ಬಂದಿಯಿಂದ ರಿತಿಕಾಳನ್ನು ತೀವ್ರ ತಪಾಸಣೆಗೊಳಪಡಿಸಿದಾಗ ಆಕೆಯ ಬಳಿ ಅಕ್ರಮವಾಗಿ ಬಚ್ಚಿಟ್ಟುಕೊಂಡಿದ್ದ ಗಾಂಜಾ, ಬೀಡಿ ಹಾಗೂ ಮೂರು ಮೊಬೈಲ್ ಸಿಮ್ ಕಾರ್ಡ್‌ಗಳು ಪತ್ತೆಯಾಗಿವೆ. ಜೈಲಿನೊಳಗೆ ಮೊಬೈಲ್ ಸಂಪರ್ಕ ಕಲ್ಪಿಸಲು ಮತ್ತು ಮಾದಕ ವ್ಯಸನಕ್ಕೆ ಪ್ರಚೋದನೆ ನೀಡಲು ಈ ಸಂಚು ರೂಪಿಸಲಾಗಿತ್ತು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಭದ್ರತಾ ಸಿಬ್ಬಂದಿ ತಕ್ಷಣವೇ ಯುವತಿಯನ್ನು ವಶಕ್ಕೆ ಪಡೆದು ಪರಪ್ಪನ ಅಗ್ರಹಾರ ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿ ರಿತಿಕಾ ರೈ ವಿರುದ್ಧ ಮಾದಕ ದ್ರವ್ಯ ವಿರೋಧಿ ಕಾಯ್ದೆ (NDPS) ಹಾಗೂ ಕಾರಾಗೃಹ ಕಾಯ್ದೆ (Prison Act) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಜೈಲಿನ ಭದ್ರತಾ ವ್ಯವಸ್ಥೆಯನ್ನು ಮೀರಿ ಇಂತಹ ವಸ್ತುಗಳನ್ನು ಸಾಗಿಸಲು ಯತ್ನಿಸುತ್ತಿರುವ ಜಾಲದ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.


Share News

Related Articles

Leave a Reply

Your email address will not be published. Required fields are marked *

Back to top button
error: Content is protected !!