ಟ್ರೆಂಡಿಂಗ್ ಸುದ್ದಿಗಳುರಾಷ್ಟ್ರೀಯ ಸುದ್ದಿಸೋಶಿಯಲ್ ಮೀಡಿಯಾ ಅಪ್ಡೇಟ್ಸ್

ದಾಂಪತ್ಯ ಜೀವನಕ್ಕೆ ವಿದಾಯ ಹೇಳಿದ ‘ಬಿಂದಾಸ್‌’ ನಟಿ: ಉದ್ಯಮಿ ಸೊಹೇಲ್‌ ಜೊತೆ ಹನ್ಸಿಕಾ ವಿಚ್ಛೇದನ!

Share News

ಮುಂಬೈ: ದಕ್ಷಿಣ ಭಾರತ ಹಾಗೂ ಬಾಲಿವುಡ್‌ನ ಜನಪ್ರಿಯ ನಟಿ, ಕನ್ನಡಿಗರ ನೆಚ್ಚಿನ ‘ಬಿಂದಾಸ್’ ಬೆಡಗಿ ಹನ್ಸಿಕಾ ಮೊಟ್ವಾನಿ ತಮ್ಮ ವೈವಾಹಿಕ ಜೀವನಕ್ಕೆ ಅಧಿಕೃತವಾಗಿ ಅಂತ್ಯ ಹಾಡಿದ್ದಾರೆ. ಉದ್ಯಮಿ ಸೊಹೇಲ್ ಖತುರಿಯಾ ಅವರಿಂದ ಹನ್ಸಿಕಾ ವಿಚ್ಛೇದನ ಪಡೆದಿದ್ದಾರೆ ಎಂದು ಅವರ ವಕೀಲರು ಸ್ಪಷ್ಟಪಡಿಸಿದ್ದಾರೆ.

ಮುಂಬೈನ ಬಾಂದ್ರಾ ಉಪನಗರದ ಕೌಟುಂಬಿಕ ನ್ಯಾಯಾಲಯವು ಈ ಜೋಡಿಗೆ ವಿಚ್ಛೇದನ ಮಂಜೂರು ಮಾಡಿದೆ. ಕಳೆದ ಕೆಲವು ಸಮಯದಿಂದ ಈ ದಂಪತಿಗಳು ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಪರಸ್ಪರ ಒಪ್ಪಿಗೆಯ ಮೇರೆಗೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಲಾಗಿತ್ತು. ಹನ್ಸಿಕಾ ಪರ ವಕೀಲರಾದ ಅದ್ನಾನ್ ಶೇಖ್ ಅವರು ಈ ವಿಚಾರವನ್ನು ಮಾಧ್ಯಮಗಳಿಗೆ ಖಚಿತಪಡಿಸಿದ್ದಾರೆ.

ಸಾಮಾನ್ಯವಾಗಿ ವಿಚ್ಛೇದನದ ವೇಳೆ ಜೀವನಾಂಶದ (Alimony) ಬಗ್ಗೆ ದೊಡ್ಡ ಚರ್ಚೆಗಳಾಗುತ್ತವೆ. ಆದರೆ, ಹನ್ಸಿಕಾ ಮೊಟ್ವಾನಿ ಅವರು ತಮ್ಮ ಪತಿ ಸೊಹೇಲ್ ಅವರಿಂದ ಯಾವುದೇ ರೀತಿಯ ಜೀವನಾಂಶವನ್ನು ಪಡೆಯಲು ನಿರಾಕರಿಸಿದ್ದಾರೆ. ಸ್ವಾಭಿಮಾನಿ ನಿರ್ಧಾರ ತಳೆದಿರುವ ನಟಿ, ಯಾವುದೇ ಆರ್ಥಿಕ ಬೇಡಿಕೆ ಇಡದೆ ಕಾನೂನಾತ್ಮಕವಾಗಿ ಬೇರ್ಪಟ್ಟಿದ್ದಾರೆ.

2022ರ ಡಿಸೆಂಬರ್‌ನಲ್ಲಿ ಜೈಪುರದ ಅರಮನೆಯಲ್ಲಿ ಅದ್ಧೂರಿಯಾಗಿ ವಿವಾಹವಾಗಿದ್ದ ಈ ಜೋಡಿಯ ನಡುವೆ ಬಿರುಕು ಮೂಡಿದೆ ಎಂಬ ವದಂತಿಗಳು ಕಳೆದ ಆಗಸ್ಟ್‌ನಿಂದಲೇ ಕೇಳಿಬರುತ್ತಿದ್ದವು. ಸಾಮಾಜಿಕ ಜಾಲತಾಣಗಳಲ್ಲಿ ಹರಡಿದ್ದ ಈ ಸುದ್ದಿಗಳು ಈಗ ನಿಜವಾಗಿವೆ.

ಬಾಲನಟಿಯಾಗಿ ಗುರುತಿಸಿಕೊಂಡಿದ್ದ ಹನ್ಸಿಕಾ, ಪುನೀತ್ ರಾಜ್‌ಕುಮಾರ್ ಅಭಿನಯದ ‘ಬಿಂದಾಸ್’ ಚಿತ್ರದ ಮೂಲಕ ಕನ್ನಡಿಗರಿಗೆ ಹತ್ತಿರವಾಗಿದ್ದರು. ತಮಿಳು ಮತ್ತು ತೆಲುಗಿನಲ್ಲೂ ಸ್ಟಾರ್ ನಟಿಯಾಗಿ ಮಿಂಚಿರುವ ಇವರು, ‘ಆಪ್ ಕಾ ಸುರೂರ್’, ‘ಒರು ಕಲ್ ಒರು ಕನ್ನಡಿ’ ಅಂತಹ ಹಿಟ್ ಚಿತ್ರಗಳನ್ನು ನೀಡಿದ್ದಾರೆ.

​ಪ್ರಸ್ತುತ ಹನ್ಸಿಕಾ ಮೊಟ್ವಾನಿ ಅವರು ತಮ್ಮ ಸಿನಿಮಾಗಳತ್ತ ಗಮನ ಹರಿಸಿದ್ದು, ವೃತ್ತಿಜೀವನದಲ್ಲಿ ಬ್ಯುಸಿಯಾಗಿದ್ದಾರೆ.


Share News

Related Articles

Leave a Reply

Your email address will not be published. Required fields are marked *

Back to top button
error: Content is protected !!