ಮಾನವೀಯತೆಗೆ ಸಾಕ್ಷಿಯಾದ ಮದ್ದೂರು ಧ್ವನಿ ಲಯನ್ ಕ್ಲಬ್: ಮಂಗಳೂರು ಕಾರಾಗೃಹದ ಕೈದಿಗೆ ದಂಡ ಕಟ್ಟಿ ಬಿಡುಗಡೆ ಭಾಗ್ಯ

ಮಂಗಳೂರು (ಮಾರ್ಚ್ 06, 2026): ಶಿಕ್ಷೆ ಮುಗಿದರೂ ದಂಡದ ಹಣ ಪಾವತಿಸಲಾಗದೆ ಕಾರಾಗೃಹದಲ್ಲೇ ಉಳಿದಿದ್ದ ಕೈದಿಯೊಬ್ಬರಿಗೆ ಮದ್ದೂರಿನ ಧ್ವನಿ ಲಯನ್ ಕ್ಲಬ್ ಆಸರೆಯಾಗಿ ನಿಂತಿದೆ. ದಂಡದ ಮೊತ್ತ ಪಾವತಿಸುವ ಮೂಲಕ ಆತನನ್ನು ಬಿಡುಗಡೆಗೊಳಿಸಿ ಕ್ಲಬ್ ಸದಸ್ಯರು ಮಾನವೀಯತೆ ಮೆರೆದಿದ್ದಾರೆ.
ಬೆಡ್ ಶೀಟ್ ವಿತರಣೆ: ಮದ್ದೂರು ಧ್ವನಿ ಲಯನ್ ಕ್ಲಬ್ ವತಿಯಿಂದ ಮಂಗಳೂರು ಜಿಲ್ಲಾ ಕಾರಾಗೃಹದ ಬಂಧಿಗಳಿಗೆ ಉಚಿತವಾಗಿ 50 ಬೆಡ್ ಶೀಟ್ಗಳನ್ನು ವಿತರಿಸಲಾಯಿತು.
ಬಂಧಿಯ ಬಿಡುಗಡೆ: ಜೈಲಿನಲ್ಲಿ ಶಿಕ್ಷೆ ಪೂರೈಸಿದ್ದರೂ, 20,000 ರೂಪಾಯಿ ದಂಡದ ಹಣ ಕಟ್ಟಲಾಗದೆ ಆತ ಕಾರಾಗೃಹದಲ್ಲೇ ಉಳಿಯಬೇಕಾಗಿತ್ತು. ಕುಟುಂಬಸ್ಥರು ಸಹ ಸಹಾಯಕ್ಕೆ ಬಾರದ ಈ ಸಂದರ್ಭದಲ್ಲಿ ಲಯನ್ ಕ್ಲಬ್ ಈ ಮೊತ್ತವನ್ನು ಸಂದಾಯಿಸಿ ಆತನ ಬಿಡುಗಡೆಗೆ ಹಾದಿ ಸುಗಮಗೊಳಿಸಿದೆ.
ದಂಡ ಹಸ್ತಾಂತರ: ನ್ಯಾಯಾಧೀಶರ ಸಮ್ಮುಖದಲ್ಲಿ ದಂಡದ ಹಣವನ್ನು ಕಾರಾಗೃಹದ ಅಧೀಕ್ಷಕರಿಗೆ ಹಸ್ತಾಂತರಿಸಲಾಯಿತು.
ಕಾರ್ಯಕ್ರಮದಲ್ಲಿ ಹಲವಾರು ನ್ಯಾಯಾಂಗ ಅಧಿಕಾರಿಗಳು ಮತ್ತು ಗಣ್ಯರು ಭಾಗವಹಿಸಿ ಕ್ಲಬ್ನ ಈ ಸಾಮಾಜಿಕ ಕಳಕಳಿಯನ್ನು ಶ್ಲಾಘಿಸಿದರು: ಶ್ರೀ ಬಸವರಾಜ ಜಿಲ್ಲಾ ಪ್ರಧಾನ ಸತ್ರ ನ್ಯಾಯಾಧೀಶರು, ಮಂಗಳೂರು
ಶ್ರೀಮತಿ ಜೈ ಬುನ್ನಿಸಾ ಹಿರಿಯ ಸಿವಿಲ್ ನ್ಯಾಯಾಧೀಶರು
ಶ್ರೀಮತಿ ರಜನಿ ರಾಜ್ ಅಧ್ಯಕ್ಷರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ
ಶ್ರೀ ಶರಣಬಸಪ್ಪ ಅಧೀಕ್ಷಕರು, ಮಂಗಳೂರು ಜಿಲ್ಲಾ ಕಾರಾಗೃಹ
ಶ್ರೀ ರಾಘವೇಂದ್ರ ರಾವ್ ಅಧ್ಯಕ್ಷರು, ಮಂಗಳೂರು ವಕೀಲರ ಸಂಘ
ಶ್ರೀ ಮನೋಜ್ ಗೌಡ ಸದಸ್ಯರು, ಮದ್ದೂರು ಲಯನ್ ಕ್ಲಬ್
ಶ್ರೀ ಪುರಂದರ ಶೆಟ್ಟಿ ಹಿರಿಯ ನ್ಯಾಯವಾದಿಗಳು.
ಕಾನೂನು ಪ್ರಕಾರ ಶಿಕ್ಷೆ ಮುಗಿದಿದ್ದರೂ ಬಡತನದ ಕಾರಣದಿಂದ ಜೈಲಿನಲ್ಲೇ ಉಳಿಯುವುದು ದುರದೃಷ್ಟಕರ. ಇಂತಹ ಸಂದರ್ಭದಲ್ಲಿ ಲಯನ್ ಕ್ಲಬ್ ಮಾಡಿರುವ ಈ ಕಾರ್ಯ ಇತರರಿಗೆ ಮಾದರಿಯಾಗಿದೆ,” ಎಂದು ಈ ಸಂದರ್ಭದಲ್ಲಿ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.
ವರದಿ :- ಆಂಟೋನಿ ಪತ್ರಕರ್ತ



