ರಾಜ್ಯ ಸುದ್ದಿಸ್ಥಳೀಯ ಸುದ್ದಿಗಳು
ಬೀದರ್: ದಾರಿಹೋಕನಿಗೆ ಹಿಂಬದಿಯಿಂದ ಒದ್ದ ಕುದುರೆ; ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು

ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರಿಗೆ ಕುದುರೆಯೊಂದು ಬಲವಾಗಿ ಒದ್ದ ಪರಿಣಾಮ, ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಬೀದರ್ ನಗರದ ಮೈಲೂರ್ ರಸ್ತೆಯಲ್ಲಿ ಸಂಭವಿಸಿದೆ.
ಮೈಲೂರಿನ ಜಮ್ಮಿ ಕಾಲೊನಿ ನಿವಾಸಿ ವೈಜನಾಥ್ (60).ವೈಜನಾಥ್ ಅವರು ಚಿದ್ರಿಯಲ್ಲಿ ತಮ್ಮ ಕೆಲಸ ಮುಗಿಸಿ, ಎಂದಿನಂತೆ ಮೈಲೂರಿಗೆ ಕಾಲ್ನಡಿಗೆಯಲ್ಲಿ ವಾಪಸ್ಸಾಗುತ್ತಿದ್ದರು. ಈ ವೇಳೆ ರಸ್ತೆಯಲ್ಲಿದ್ದ ಕುದುರೆಯೊಂದು ಅನಿರೀಕ್ಷಿತವಾಗಿ ಹಿಂದಿನಿಂದ ಬಂದು ಅವರಿಗೆ ಬಲವಾಗಿ ಒದ್ದಿದೆ.
ಕುದುರೆ ಒದ್ದ ರಭಸಕ್ಕೆ ವೈಜನಾಥ್ ಅವರ ತಲೆಗೆ ತೀವ್ರ ಸ್ವರೂಪದ ಗಾಯಗಳಾಗಿದ್ದವು. ಕೂಡಲೇ ಅವರನ್ನು ಸ್ಥಳೀಯ ಬ್ರಿಮ್ಸ್ (BRIMS) ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಪರಿಸ್ಥಿತಿ ಚಿಂತಾಜನಕವಾಗಿದ್ದರಿಂದ ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ ಹೈದರಾಬಾದ್ಗೆ ಕರೆದೊಯ್ಯಲಾಗುತ್ತಿತ್ತು. ದುರದೃಷ್ಟವಶಾತ್, ಆಸ್ಪತ್ರೆಗೆ ತಲುಪುವ ಮುನ್ನವೇ ಮಾರ್ಗಮಧ್ಯೆ ಅವರು ಕೊನೆಯುಸಿರೆಳೆದಿದ್ದಾರೆ.
ವರದಿ :- ಆಂಟೋನಿ ಪತ್ರಕರ್ತ



