ಬೆಂಗಳೂರು ಹೋಟೆಲ್ಗಳ ಮೇಲೆ ಅನಿಲ ಬಿಕ್ಕಟ್ಟಿನ ನೆರಳು:ಸೇವೆ ಸ್ಥಗಿತದ ಎಚ್ಚರಿಕೆ?

ಬೆಂಗಳೂರಿನ ಹೋಟೆಲ್ ಉದ್ಯಮವು ಈಗ ದೊಡ್ಡ ಸಂಕಷ್ಟಕ್ಕೆ ಸಿಲುಕಿದೆ. ವಾಣಿಜ್ಯ ಅಡುಗೆ ಅನಿಲದ (Commercial LPG) ತೀವ್ರ ಕೊರತೆಯಿಂದಾಗಿ ಹೋಟೆಲ್ ಮತ್ತು ರೆಸ್ಟೋರೆಂಟ್ಗಳನ್ನು ನಡೆಸುವುದು ಅಸಾಧ್ಯ ಎಂಬ ಹಂತಕ್ಕೆ ತಲುಪಿದೆ ಎಂದು ಬೆಂಗಳೂರು ಹೋಟೆಲ್ಗಳ ಸಂಘ ಪ್ರಕಟಣೆಯಲ್ಲಿ ತಿಳಿಸಿದೆ.
ಜಾಗತಿಕ ಯುದ್ಧದ ಪರಿಣಾಮ: ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದಿಂದಾಗಿ ಅನಿಲ ಪೂರೈಕೆಯ ಸರಪಳಿ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ.
ತೈಲ ಕಂಪನಿಗಳ ನಡೆ: ಮುಂದಿನ 70 ದಿನಗಳವರೆಗೆ ಪೂರೈಕೆಯಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ ಎಂದು ಭರವಸೆ ನೀಡಿದ್ದ ಕಂಪನಿಗಳು, ಈಗ ಏಕಾಏಕಿ ಸರಬರಾಜು ಸ್ಥಗಿತಗೊಳಿಸಿವೆ.
ಬೆಲೆ ಏರಿಕೆ ಬರೆ: ಅನಿಲದ ಕೊರತೆಯ ನಡುವೆಯೇ ವಾಣಿಜ್ಯ ಸಿಲಿಂಡರ್ ಬೆಲೆಯನ್ನು 115 ರೂಪಾಯಿ ಹೆಚ್ಚಿಸಿರುವುದು ಹೋಟೆಲ್ ಮಾಲೀಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
“ಅನಿಲ ಪೂರೈಕೆ ಇಲ್ಲದೆ ಅಡುಗೆ ತಯಾರಿಸುವುದು ಅಸಾಧ್ಯ. ತೈಲ ಕಂಪನಿಗಳ ಈ ಹಠಾತ್ ನಿರ್ಧಾರದಿಂದಾಗಿ ನಾವು ಹೋಟೆಲ್ಗಳನ್ನು ಬಂದ್ ಮಾಡುವುದು ಅನಿವಾರ್ಯವಾಗಿದೆ.” – ಬೆಂಗಳೂರು ಹೋಟೆಲ್ಗಳ ಸಂಘ (ರಿ)
ಈ ಕೂಡಲೇ ಕೇಂದ್ರ ಸರ್ಕಾರವು ಮಧ್ಯಪ್ರವೇಶಿಸಿ ತೈಲ ಕಂಪನಿಗಳೊಂದಿಗೆ ಮಾತುಕತೆ ನಡೆಸಬೇಕು ಮತ್ತು ಅನಿಲ ಪೂರೈಕೆಯನ್ನು ಸುಗಮಗೊಳಿಸಿ ಬೆಲೆ ಏರಿಕೆಯನ್ನು ನಿಯಂತ್ರಿಸಬೇಕು ಎಂದು ಸಂಘವು ಒತ್ತಾಯಿಸಿದೆ. ಇಲ್ಲದಿದ್ದಲ್ಲಿ ಬೆಂಗಳೂರಿನ ಜನಸಾಮಾನ್ಯರ ಆಹಾರದ ವ್ಯವಸ್ಥೆಯ ಮೇಲೆ ಇದು ತೀವ್ರ ಪರಿಣಾಮ ಬೀರಲಿದೆ.
ವರದಿ :- ಆಂಟೋನಿ ಪತ್ರಕರ್ತ



