Crime Newsಕ್ರೈಂ ಸುದ್ದಿರಾಷ್ಟ್ರೀಯ ಸುದ್ದಿ

ಹುಚ್ಚು ಪ್ರೀತಿಯ ಬೆಂಕಿ: ಸ್ವಂತ ಅವಳಿ ಸಹೋದರಿಯನ್ನೇ 40 ಬಾರಿ ಇರಿದು ಕೊಂದ ಪಾಪಿ ಹಾರ್ದಿಕ್!

Share News

ಮೊರಾದಾಬಾದ್ (ಉತ್ತರ ಪ್ರದೇಶ): ಹೋಳಿ ಹಬ್ಬದ ಸಂಭ್ರಮ ಇರಬೇಕಿದ್ದ ಮನೆಯಲ್ಲಿ ಈಗ ಸ್ಮಶಾನ ಮೌನ ಆವರಿಸಿದೆ. ಪ್ರೇಮ ವೈಫಲ್ಯದಿಂದ ಉಂಟಾದ ಹತಾಶೆ ಮತ್ತು  ರಕ್ತದ ಸಂಬಂಧವನ್ನೇ ಬಲಿಪಡೆದಿದೆ. ಇನ್‌ಸ್ಟಾಗ್ರಾಮ್ ಪ್ರಿಯತಮೆಯೊಂದಿಗಿನ ಬ್ರೇಕಪ್‌ಗೆ ತನ್ನ ಕುಟುಂಬವೇ ಕಾರಣ ಎಂದು ನಂಬಿದ್ದ ಯುವಕನೊಬ್ಬ, ತನ್ನ ಅವಳಿ ಸಹೋದರಿಯನ್ನೇ ಅಮಾನುಷವಾಗಿ ಹತ್ಯೆ ಮಾಡಿದ್ದಾನೆ.

ಗುರಗ್ರಾಮ್‌ನಲ್ಲಿ ಕೆಲಸ ಮಾಡುತ್ತಿದ್ದ ಅವಳಿ ಸಹೋದರ-ಸಹೋದರಿಯರಾದ ಹಾರ್ದಿಕ್ ಮತ್ತು ಹಿಮ್‌ಶಿಖಾ (25), ಹೋಳಿ ಹಬ್ಬದ ಆಚರಣೆಗಾಗಿ ಬುದ್ಧಿ ವಿಹಾರ್ ಕಾಲೋನಿಯ ಮನೆಗೆ ಬಂದಿದ್ದರು. ತಾಯಿ ಕೆಲಸಕ್ಕೆ ಹೋದ ಸಮಯವನ್ನೇ ಹೊಂಚು ಹಾಕಿದ್ದ ಹಾರ್ದಿಕ್, ಮನೆಯಲ್ಲಿ ಒಂಟಿಯಾಗಿದ್ದ ಸಹೋದರಿ ಹಿಮ್‌ಶಿಖಾ ಮೇಲೆ ಚಾಕುವಿನಿಂದ ಮುಗಿಬಿದ್ದಿದ್ದಾನೆ. ಬರೋಬ್ಬರಿ 40ಕ್ಕೂ ಹೆಚ್ಚು ಬಾರಿ ದೇಹದ ವಿವಿಧ ಭಾಗಗಳಿಗೆ ಇರಿದು ಆಕೆಯನ್ನು ಸ್ಥಳದಲ್ಲೇ ಕೊಲೆ ಮಾಡಿದ್ದಾನೆ.

ಸಹೋದರಿಯ ಪ್ರಾಣ ತೆಗೆದ ನಂತರ ಹಾರ್ದಿಕ್ ಕಿಂಚಿತ್ತೂ ಪಶ್ಚಾತ್ತಾಪವಿಲ್ಲದೆ ತನ್ನ ತಾಯಿಗೆ ಫೋನ್ ಮಾಡಿ ಕೂಡಲೇ ಮನೆಗೆ ಬರುವಂತೆ ಹೇಳಿದ್ದಾನೆ. ಮಗನ ಕರೆ ಕೇಳಿ ಆತಂಕದಿಂದ ಮನೆಗೆ ಓಡಿ ಬಂದ ತಾಯಿಗೆ, ಮಗಳು ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡು ದಿಗ್ಭ್ರಮೆಯಾಗಿದೆ. ಈ ವೇಳೆ ಹಾರ್ದಿಕ್ ತನ್ನ ತಾಯಿಯ ಮೇಲೂ ಮಾರಣಾಂತಿಕ ಹಲ್ಲೆ ನಡೆಸಿ, ಕಾರಿನಲ್ಲಿ ಸ್ಥಳದಿಂದ ಪರಾರಿಯಾಗಿದ್ದಾನೆ.

ಪೊಲೀಸ್ ತನಿಖೆಯ ಪ್ರಕಾರ, ಹಾರ್ದಿಕ್ ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯವಾಗಿದ್ದ ಯುವತಿಯನ್ನು ಪ್ರೀತಿಸುತ್ತಿದ್ದ. ಆದರೆ ಇತ್ತೀಚೆಗೆ ಆ ಸಂಬಂಧ ಮುರಿದುಬಿದ್ದಿತ್ತು. ಈ ಬ್ರೇಕಪ್‌ಗೆ ತನ್ನ ತಾಯಿ ಮತ್ತು ಸಹೋದರಿಯೇ ಪ್ರೇರಣೆ ನೀಡಿದ್ದಾರೆ ಎಂದು ಹಾರ್ದಿಕ್ ಗಾಢವಾಗಿ ನಂಬಿದ್ದ. ಇದೇ ದ್ವೇಷದಿಂದಾಗಿ ಆತ ಈ ಭೀಕರ ಕೃತ್ಯವೆಸಗಿದ್ದಾನೆ ಎನ್ನಲಾಗಿದೆ.

ಇಂದಿನ ಯುವಜನತೆ ಸಾಮಾಜಿಕ ಜಾಲತಾಣಗಳ ಮಾಯೆ ಹಾಗೂ ಪ್ರೀತಿ-ಪ್ರೇಮದ ಹೆಸರಲ್ಲಿ ದಾರಿ ತಪ್ಪುತ್ತಿರುವುದು ಆತಂಕಕಾರಿ. ಕ್ಷಣಿಕ ಕೋಪ, ಮಾನಸಿಕ ಖಿನ್ನತೆ ಅಥವಾ ಮಾದಕ ವ್ಯಸನಕ್ಕೆ ಬಲಿಯಾಗಿ ಹೆತ್ತವರು ಮತ್ತು ಒಡಹುಟ್ಟಿದವರನ್ನೇ ಶತ್ರುಗಳಂತೆ ಕಾಣುವ ಪ್ರವೃತ್ತಿ ಬೆಳೆಯುತ್ತಿದೆ. ಸದ್ಯ ಪೊಲೀಸರು ಆರೋಪಿ ಹಾರ್ದಿಕ್‌ನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

ವರದಿ :- ಆಂಟೋನಿ ಪತ್ರಕರ್ತ


Share News

Leave a Reply

Your email address will not be published. Required fields are marked *

Back to top button
error: Content is protected !!