Crime Newsಕ್ರೈಂ ಸುದ್ದಿರಾಜ್ಯ ಸುದ್ದಿ

ಉದ್ಯಮಿಗೆ ‘ನರ್ಸ್’ ಸುಷ್ಮಿತಾ ಹೆಣೆದಿದ್ದ ಮಾಯದ ಬಲೆ: 25 ಲಕ್ಷಕ್ಕೆ ಡಿಮ್ಯಾಂಡ್ ಇಟ್ಟಿದ್ದ ಗ್ಯಾಂಗ್ ಈಗ ಪೊಲೀಸ್ ಅತಿಥಿ!

Share News

ದಾವಣಗೆರೆ: ಸಹಾಯದ ಹಸ್ತ ಚಾಚಿದ ಉದ್ಯಮಿಯನ್ನೇ ನಂಬಿಸಿ, ‘ಹನಿಟ್ರ್ಯಾಪ್’ ಖೆಡ್ಡಾಕ್ಕೆ ಕೆಡವಿ ಲಕ್ಷಾಂತರ ರೂಪಾಯಿ ಸುಲಿಗೆ ಮಾಡಲು ಯತ್ನಿಸಿದ ನರ್ಸ್ ಮತ್ತು ಆಕೆಯ ಕಿಲಾಡಿ ಗ್ಯಾಂಗ್ ಈಗ ಪೊಲೀಸರ ಬಲೆಗೆ ಬಿದ್ದಿದೆ.

ವಿದ್ಯಾನಗರದ ಸ್ಟಾಫ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದ 27 ವರ್ಷದ ಸುಷ್ಮಿತಾ, ರಾಜಕೀಯ ನಂಟು ಹೊಂದಿದ್ದ 66 ವರ್ಷದ ಹಿರಿಯ ಉದ್ಯಮಿಯನ್ನು ಟಾರ್ಗೆಟ್ ಮಾಡಿದ್ದಳು. “ಮಕ್ಕಳ ಶಾಲಾ ಫೀಸ್ ಕಟ್ಟಲು ಹಣವಿಲ್ಲ, ಸಹಾಯ ಮಾಡಿ” ಎಂದು ಅಸಹಾಯಕತೆ ಪ್ರದರ್ಶಿಸಿ ಉದ್ಯಮಿಯ ವಿಶ್ವಾಸ ಗಳಿಸಿದ್ದ ಈಕೆ, ಮಾರ್ಚ್ 1ರಂದು ಅವರನ್ನು ಸರ್ವೀಸ್ ಅಪಾರ್ಟ್‌ಮೆಂಟ್‌ಗೆ ಬರುವಂತೆ ಪುಸಲಾಯಿಸಿದ್ದಳು.

ಉದ್ಯಮಿ ರೂಮ್‌ಗೆ ಬರುತ್ತಿದ್ದಂತೆ ಪೂರ್ವಯೋಜಿತ ಸಂಚಿನಂತೆ ಸುಷ್ಮಿತಾಳ ಗ್ಯಾಂಗ್ ಎಂಟ್ರಿ ಕೊಟ್ಟಿದೆ.

ವಿಡಿಯೋ ಶೂಟ್: ಬೆಕ್ಕಿನ ಕಣ್ಣು ಕೃಷ್ಣ ಮತ್ತು ರಾಹುಲ್ ಎಂಬುವವರು ಮೊಬೈಲ್ ಹಿಡಿದು ರೂಮ್‌ಗೆ ನುಗ್ಗಿ ವಿಡಿಯೋ ಮಾಡಿಕೊಂಡಿದ್ದಾರೆ.

ಬ್ಲ್ಯಾಕ್‌ಮೇಲ್: “ನಿಮ್ಮ ವಿಡಿಯೋ ವೈರಲ್ ಮಾಡುತ್ತೇವೆ” ಎಂದು ಬೆದರಿಸಿ ಬರೋಬ್ಬರಿ 25 ಲಕ್ಷ ರೂಪಾಯಿ ನೀಡುವಂತೆ ಉದ್ಯಮಿಗೆ ಡಿಮ್ಯಾಂಡ್ ಇಟ್ಟಿದ್ದಾರೆ.

ರಾಜಿ ನಾಟಕ: ಮಧ್ಯಸ್ಥಿಕೆ ವಹಿಸುವಂತೆ ನಟಿಸಿದ ಚನ್ನಬಸಪ್ಪ ಎಂಬಾತ, ಉದ್ಯಮಿಯನ್ನು ಹಣ ನೀಡುವಂತೆ ಒತ್ತಾಯಿಸಿದ್ದಾನೆ.

ಹೆದರಿದಂತೆ ನಟಿಸಿದ ಉದ್ಯಮಿ, 12 ಲಕ್ಷ ರೂಪಾಯಿ ನೀಡುವುದಾಗಿ ಒಪ್ಪಿ ಅಲ್ಲಿಂದ ಪಾರಾಗಿದ್ದಾರೆ. ಬಳಿಕ ಮಾರ್ಚ್ 3ರಂದು “ಹಣ ರೆಡಿಯಾಗಿದೆ, ಆಂಜನೇಯ ನಗರಕ್ಕೆ ಬನ್ನಿ” ಎಂದು ಆರೋಪಿಗಳನ್ನು ಕರೆಸಿಕೊಂಡಿದ್ದಾರೆ. ಉದ್ಯಮಿ ಬಳಿ 1 ಲಕ್ಷ ರೂಪಾಯಿ ಅಡ್ವಾನ್ಸ್ ಪಡೆದು ಎಸ್ಕೇಪ್ ಆಗಲು ಯತ್ನಿಸುತ್ತಿದ್ದಾಗಲೇ ಹೊಂಚು ಹಾಕಿದ್ದ ವಿದ್ಯಾನಗರ ಪೊಲೀಸರು ನಾಲ್ವರು ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ.

ಸುಷ್ಮಿತಾ (ಮಾಸ್ಟರ್ ಮೈಂಡ್ – ಸ್ಟಾಫ್ ನರ್ಸ್),ಬೆಕ್ಕಿನ ಕಣ್ಣು ಕೃಷ್ಣ,ರಾಹುಲ್,ಚನ್ನಬಸಪ್ಪ ಈ ಪ್ರಕರಣದ ಮತ್ತೊಬ್ಬ ಆರೋಪಿ ಸಂಜನಾ ಎಂಬಾಕೆ ಸದ್ಯ ತಲೆಮರೆಸಿಕೊಂಡಿದ್ದು, ಪೊಲೀಸರು ಆಕೆಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ಪರಿಚಯವಿಲ್ಲದವರು ಅಥವಾ ಅತಿಯಾದ ಆತ್ಮೀಯತೆ ತೋರುವವರಿಂದ ಎಚ್ಚರವಾಗಿರಿ ಎಂಬ ಸಂದೇಶವನ್ನು ಈ ಘಟನೆ ನೀಡಿದೆ.

ವರದಿ :- ಆಂಟೋನಿ ಪತ್ರಕರ್ತ


Share News

Related Articles

Leave a Reply

Your email address will not be published. Required fields are marked *

Back to top button
error: Content is protected !!