Crime Newsಕ್ರೈಂ ಸುದ್ದಿರಾಜ್ಯ ಸುದ್ದಿ

ವಿಟ್ಲ: ಬಾಡಿಗೆ ಮನೆಯಲ್ಲಿ ‘ಡ್ರಗ್ಸ್’ ಘಮಲು; ಪೊಲೀಸರ ಮಿಂಚಿನ ದಾಳಿ, ನಾಲ್ವರು ಮಾದಕ ಜಾಲದ ಕಿಲಾಡಿಗಳ ಬಂಧನ!

Share News

ವಿಟ್ಲ: ಶಾಂತವಾಗಿದ್ದ ನೆಟ್ಲ ಮುಡ್ನೂರು ಗ್ರಾಮದ ಭಗವಂತ ಕೋಡಿಯ ಬಾಡಿಗೆ ಮನೆಯೊಂದು ಮಾದಕ ವ್ಯಸನಿಗಳ ಅಡ್ಡವಾಗಿ ಮಾರ್ಪಟ್ಟಿದ್ದ ಗುಟ್ಟನ್ನು ವಿಟ್ಲ ಪೊಲೀಸರು ರಟ್ಟು ಮಾಡಿದ್ದಾರೆ. ಎಂಡಿಎಂಎ (MDMA) ಎಂಬ ಅಪಾಯಕಾರಿ ಮಾದಕ ದ್ರವ್ಯವನ್ನು ಗಿರಾಕಿಗಳಿಗೆ ಸರಬರಾಜು ಮಾಡುತ್ತಿದ್ದ ಅಶ್ರಫ್ ಮತ್ತು ಆತನ ಗ್ಯಾಂಗ್‌ ಈಗ ಕಂಬಿ ಎಣಿಸುತ್ತಿದೆ.

ನೇರಳಕಟ್ಟೆಯ ಇಂದಿರಾ ನಗರದ ಬಾಡಿಗೆ ಮನೆಯೊಂದರಲ್ಲಿ ಅಶ್ರಫ್ ಜಿ (38) ಎಂಬಾತ ಅಕ್ರಮವಾಗಿ ಮಾದಕ ವಸ್ತು ಮಾರಾಟ ಮಾಡುತ್ತಿರುವ ಬಗ್ಗೆ ಪೊಲೀಸರಿಗೆ ಖಚಿತ ಸುಳಿವು ಲಭಿಸಿತ್ತು. ಮಾಹಿತಿ ಸಿಕ್ಕ ಬೆನ್ನಲ್ಲೇ ಕಾರ್ಯಪ್ರವೃತ್ತರಾದ ವಿಟ್ಲ ಎಸ್‌ಐ ರತ್ನಕುಮಾರ್ ಎಂ. ನೇತೃತ್ವದ ತಂಡ, ಯಾವುದೇ ಸುಳಿವು ನೀಡದೆ ಅಡ್ಡದ ಮೇಲೆ ಮಿಂಚಿನ ದಾಳಿ ನಡೆಸಿದೆ.

ದಾಳಿಯ ವೇಳೆ ಮನೆಯಲ್ಲಿದ್ದ ಪ್ರಮುಖ ಆರೋಪಿ ಅಶ್ರಫ್ ಜಿ ಸೇರಿದಂತೆ ನಾಲ್ವರನ್ನು ಪೊಲೀಸರು ಸುತ್ತುವರಿದು ಬಂಧಿಸಿದ್ದಾರೆ. ಬಂಧಿತರನ್ನು ಈ ಕೆಳಗಿನಂತೆ ಗುರುತಿಸಲಾಗಿದೆ:

ಅಶ್ರಫ್ ಜಿ (38) – (ಮುಖ್ಯ ಆರೋಪಿ),ಹಫೀಝ್ ಅಲಿಯಾಸ್ ಅಪ್ಪಿ, ಅಫ್ವಾನ್,ಅಶ್ರಫ್ ಎನ್.ಎ.

ಮನೆಯೊಳಗೆ ಪೊಲೀಸರು ನಡೆಸಿದ ತೀವ್ರ ತಪಾಸಣೆಯ ವೇಳೆ ಬರೋಬ್ಬರಿ 1.79 ಲಕ್ಷ ರೂಪಾಯಿ ಮೌಲ್ಯದ 17.97 ಗ್ರಾಂ ಎಂಡಿಎಂಎ (MDMA) ಮಾದಕ ದ್ರವ್ಯ ಪತ್ತೆಯಾಗಿದೆ. ಕೇವಲ ಡ್ರಗ್ಸ್ ಮಾತ್ರವಲ್ಲದೆ, ಆರೋಪಿಗಳು ತಮ್ಮ ರಕ್ಷಣೆಗಾಗಿ ಅಥವಾ ಬೆದರಿಸಲು ಇಟ್ಟುಕೊಂಡಿದ್ದ ಚೂರಿಗಳನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಬಂಧಿತ ಆರೋಪಿಗಳ ವಿರುದ್ಧ ಮಾದಕ ದ್ರವ್ಯ ವಿರೋಧಿ ಕಾಯ್ದೆ (NDPS) ಹಾಗೂ ಅಕ್ರಮ ಶಸ್ತ್ರಾಸ್ತ್ರ ಕಾಯ್ದೆ (Arms Act) ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಈ ಡ್ರಗ್ಸ್ ಮಾಫಿಯಾದ ಬೇರುಗಳು ದಕ್ಷಿಣ ಕನ್ನಡದ ಬೇರೆಲ್ಲಿಗೆ ಚಾಚಿಕೊಂಡಿವೆ? ಈ ಜಾಲದ ಹಿಂದೆ ಇನ್ನೂ ಯಾರಿದ್ದಾರೆ? ಎಂಬ ಬಗ್ಗೆ ಪೊಲೀಸರು ಈಗ ತನಿಖೆಯನ್ನು ಚುರುಕುಗೊಳಿಸಿದ್ದಾರೆ.

ವರದಿ :- ಆಂಟೋನಿ ಪತ್ರಕರ್ತ


Share News

Related Articles

Leave a Reply

Your email address will not be published. Required fields are marked *

Back to top button
error: Content is protected !!